Breaking News

ಗಾರೆ ಕೆಲಸ ಬಿಟ್ಟು ಗಾಂಜಾ ಮಾರಾಟ – ಕಾಲೇಜು ಹುಡುಗರೇ ಇವರ ಟಾರ್ಗೆಟ್!

ದೊಡ್ಡಬಳ್ಳಾಪುರ: ಕಾಲೇಜುಗಳ ಸುತ್ತಮುತ್ತ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪದ ಮೇಲೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಮೂವರು ಅಂತರ್‌ರಾಜ್ಯ ಗಾಂಜಾ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ₹6 ಲಕ್ಷ ಮೌಲ್ಯದ 5.6 ಕೆಜಿ ಗಾಂಜಾ ಹಾಗೂ ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ಸುರೇಶ ಸಹಾನಿ (34), ರೋಹಿತ್ ಕುಮಾರ್ (25) ಹಾಗೂ ರೂಪೇಶ್ ಕುಮಾರ್ (30) ಎಂದು ಗುರುತಿಸಲಾಗಿದೆ. ಬಿಹಾರ ಮತ್ತು ಜಾರ್ಖಂಡ್ ಮೂಲದ ಇವರು ದೊಡ್ಡಬಳ್ಳಾಪುರದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದು, ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗಾಂಜಾ ಮಾರಾಟಕ್ಕೆ ಮುಂದಾಗಿದ್ದರು ಎನ್ನಲಾಗಿದೆ. ಇನ್ಸ್‌ಪೆಕ್ಟರ್ ನವೀನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಗಾಂಜಾ ಎಲ್ಲಿಂದ ತರಲಾಗಿತ್ತು ಹಾಗೂ ಯಾರಿಗೆ ಮಾರಾಟ ಮಾಡಲು ಸಿದ್ಧತೆ ನಡೆಸಲಾಗಿತ್ತು ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Share News

About BigTv News

Check Also

ಬೆಂಗಳೂರಲ್ಲಿ ಅಂಗಡಿಯಲ್ಲೇ ಮಾಲೀಕನ ಬರ್ಬರ ಕೊಲೆ

ಬೆಂಗಳೂರು: ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗೃಹೋಪಯೋಗಿ ವಸ್ತುಗಳ ಅಂಗಡಿ ಮಾಲೀಕ ರಾಜು ಸಿಂಗ್ ಅವರನ್ನು ಅಂಗಡಿಯೊಳಗೇ ಬರ್ಬರವಾಗಿ ಕೊಲೆ …

Leave a Reply

Your email address will not be published. Required fields are marked *