ಟಿ.ನರಸೀಪುರದ ವಿವೇಕನಗರದಲ್ಲಿ ಶನಿವಾರ ಬೆಳಗ್ಗೆ 9.30ರ ಸುಮಾರಿಗೆ ಸುಭಾಷ್ (34) ಎಂಬ ಯುವಕನನ್ನು ಮೂವರು ಆರೋಪಿಗಳು ಡ್ರ್ಯಾಗರ್ ಮತ್ತು ಚೂರಿಯಿಂದ ಇರಿದು ಕೊಲೆ ಮಾಡಿದ್ದಾರೆ. ಬಳಿಕ ಮೂವರು ಆರೋಪಿಗಳು ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾರೆ. ಆಸ್ತಿ ವಿಚಾರಕ್ಕೆ ಈ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸುಭಾಷ್ ಹಾಗೂ ಅವರ ತಂದೆ ನಡುವೆ ಕಳೆದ ವರ್ಷ ಗಲಾಟೆ ನಡೆದಿದ್ದು, ತಂದೆಯ ಕೊಲೆಗೆ ಯತ್ನಿಸಿದ ಆರೋಪದಡಿ ಪ್ರಕರಣ ದಾಖಲಾಗಿತ್ತು. ತಂದೆ-ಮಗನ ನಡುವೆ ರಾಜಿ ಮಾಡಿಸುವುದಾಗಿ ಮೂವರು ಯುವಕರು ಸುಭಾಷ್‌ನಿಂದ ಹಣ ಪಡೆದಿದ್ದರು ಎನ್ನಲಾಗಿದ್ದು, ರಾಜಿ ಮಾಡಿಸದ ಕಾರಣಕ್ಕೆ ಕೊಲೆ ನಡೆದಿದೆ ಎನ್ನಲಾಗಿದೆ. ಈ ಬಗ್ಗೆ ಟಿ.ನರಸೀಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news
