Breaking News

ಸಕಲೇಶಪುರದಲ್ಲಿ ಸಿನಿಮೀಯ ಕಾರ್ಯಾಚರಣೆ: ಸರಗಳ್ಳತನ ಪ್ರಕರಣದ ಆರೋಪಿಗಳ ಬಂಧನ

ಸಕಲೇಶಪುರ: ಪಟ್ಟಣದಲ್ಲಿ ಮಹಿಳೆಯರ ಸರ ದೋಚಿ ಆತಂಕ ಸೃಷ್ಟಿಸಿದ್ದ ಇಬ್ಬರು ಸರಗಳ್ಳರನ್ನು ಸಕಲೇಶಪುರ ಪೊಲೀಸರು ಮಂಗಳವಾರ ಮುಂಜಾನೆ ಬಂಧಿಸಿದ್ದಾರೆ. ಕೆಲ ದಿನಗಳ ಹಿಂದೆ ಹೊಳೆ ಮಲ್ಲೇಶ್ವರ ದೇವಸ್ಥಾನದ ಬಳಿ ರಾಣಿಯಮ್ಮ ಎಂಬುವವರ 45 ಗ್ರಾಂ ಚಿನ್ನದ ಸರವನ್ನು ಬೈಕ್‌ನಲ್ಲಿ ಬಂದ ಇಬ್ಬರು ಕಿತ್ತುಕೊಂಡು ಪರಾರಿಯಾಗಿದ್ದರು. ತಂತ್ರಜ್ಞಾನ ಹಾಗೂ ನೆಟ್‌ವರ್ಕ್ ನೆರವಿನಿಂದ ಆರೋಪಿಗಳ ಚಲನವಲನ ಪತ್ತೆಹಚ್ಚಿದ ಪೊಲೀಸರು, ಹೇಮಾವತಿ ಸೇತುವೆ ಬಳಿ ನಾಕಾಬಂದಿ ಹಾಕಿ ಅವರನ್ನು ಬೆನ್ನಟ್ಟಿದ್ದಾರೆ. ಹಳೆ ಬಸ್ ನಿಲ್ದಾಣದ ಬಳಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಗಳು ಪೊಲೀಸ್ ವಾಹನಕ್ಕೆ ಬೈಕ್ ಢಿಕ್ಕಿ ಹೊಡೆಸಿದ್ದು, ಓರ್ವನನ್ನು ಸ್ಥಳದಲ್ಲೇ ವಶಕ್ಕೆ ಪಡೆಯಲಾಗಿದೆ. ಮತ್ತೊಬ್ಬ ಆರೋಪಿ ಪರಾರಿಯಾಗಿ ಬಟ್ಟೆ ಬದಲಿಸಿಕೊಂಡು ಮತ್ತೆ ಘಟನಾ ಸ್ಥಳಕ್ಕೆ ಬಂದು ಸಾರ್ವಜನಿಕರ ನಡುವೆ ನಿಂತಿದ್ದ. ಆತನ ಸಂಶಯಾಸ್ಪದ ವರ್ತನೆ ಗಮನಿಸಿದ ಪೊಲೀಸರು ಆತನನ್ನೂ ಬಂಧಿಸಿದ್ದಾರೆ. ಬಂಧಿತರು ಈ ಹಿಂದೆ ನಡೆದ ಸರಗಳ್ಳತನ ಪ್ರಕರಣಗಳಲ್ಲೂ ಭಾಗಿಯಾಗಿರುವ ಶಂಕೆ ಇದ್ದು, ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

Share News

About BigTv News

Check Also

ಯುವತಿಯರನ್ನು ಚುಡಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಯುವಕನ ಮೇಲೆ ಹಲ್ಲೆ ಆರೋಪ

ಬಾಗಲಕೋಟೆ: ಯುವತಿಯರನ್ನು ಚುಡಾಯಿಸುತ್ತಿದ್ದುದನ್ನು ಪ್ರಶ್ನಿಸಿದ ಕಾರಣಕ್ಕೆ ಯುವಕನೊಬ್ಬನ ಮೇಲೆ ಕೆಲ ಯುವಕರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೆರೂರು ಪಟ್ಟಣದಲ್ಲಿ …

Leave a Reply

Your email address will not be published. Required fields are marked *