Breaking News

ಬೆಂಗಳೂರು | ವಕೀಲ ಮಂಜುನಾಥ್ ಹತ್ಯೆ ಪ್ರಕರಣ: ಶೂಟರ್‌ಗೆ ಶೋಧ

ಬೆಂಗಳೂರು: ಪಟ್ಟಂದೂರು ಅಗ್ರಹಾರದಲ್ಲಿ ವಕೀಲ ಮಂಜುನಾಥ್ ಅವರನ್ನು ಗುಂಡಿಟ್ಟು ಕೊಲೆ ಮಾಡಿದ ಪ್ರಕರಣದಲ್ಲಿ ಬಿಹಾರ ಮೂಲದ ಆರೋಪಿ ಅಮಿತ್ ಕುಮಾರ್ ದುಬೆ ಬಂಧಿತನಾಗಿದ್ದಾನೆ. ಮತ್ತೊಬ್ಬ ಆರೋಪಿ ಪವನ್ ಕುಮಾರ್‌ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಅಕ್ಟೋಬರ್ 19ರಂದು ಬಾಡಿಗೆ ವಿಚಾರವಾಗಿ ಉಂಟಾದ ಜಗಳದ ಹಿನ್ನೆಲೆಯಲ್ಲಿ ಅಮಿತ್ ಮತ್ತು ಪವನ್, ಮಂಜುನಾಥ್ ಅವರನ್ನು ಹೊರಗೆ ಕರೆಸಿ ತಲೆ ಹಾಗೂ ಎದೆಗೆ ಗುಂಡು ಹಾರಿಸಿ ಕೊಲೆ ಮಾಡಿದ್ದರು. ಬಳಿಕ ಇಬ್ಬರೂ ತಲೆಮರೆಸಿಕೊಂಡಿದ್ದರು. ಆರೋಪಿಗಳ ಬಂಧನಕ್ಕಾಗಿ ಎಂಟು ವಿಶೇಷ ತಂಡಗಳನ್ನು ರಚಿಸಿದ್ದ ಪೊಲೀಸರು, ಬಿಹಾರದಲ್ಲಿ ಸಂಬಂಧಿಕರ ಮನೆಯಲ್ಲಿ ಅಡಗಿದ್ದ ಅಮಿತ್‌ನನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಕಂಟ್ರಿಮೇಡ್ ಪಿಸ್ತೂಲ್ ಬಗ್ಗೆ ವಿಚಾರಣೆ ಮುಂದುವರಿದಿದ್ದು, ಮತ್ತೊಬ್ಬ ಆರೋಪಿ ಪವನ್‌ಗಾಗಿ ಶೋಧ ನಡೆಯುತ್ತಿದೆ.

Share News

About BigTv News

Check Also

ಮನ್‌ಮುಲ್‌ ಹಾಲಿನಪುಡಿ ಕಲಬೆರಕೆ ಪ್ರಕರಣ: ಬಂಧಿತರ ಸಂಖ್ಯೆ 12ಕ್ಕೆ ಏರಿಕೆ

ಮಂಡ್ಯ: ಮನ್‌ಮುಲ್ ಹಾಲಿನ ಪುಡಿ ಕಲಬೆರಕೆ ಪ್ರಕರಣದಲ್ಲಿ ಎರಡೂವರೆ ತಿಂಗಳಿಂದ ತಲೆಮರೆಸಿಕೊಂಡಿದ್ದ ಉಪ ವ್ಯವಸ್ಥಾಪಕ ಟಿ. ರಾಮಕೃಷ್ಣ ಅವರನ್ನು ಪೊಲೀಸರು …

Leave a Reply

Your email address will not be published. Required fields are marked *