Breaking News

ಬೆಂಗಳೂರು | ವಿದ್ಯಾರ್ಥಿ ಕೊಲೆ: ಮೂವರು ಬಾಲಕರೂ ಸೇರಿದಂತೆ ನಾಲ್ವರ ಬಂಧನ

ನಾಗರಬಾವಿಯ ಮುದ್ದಿನಪಾಳ್ಯದಲ್ಲಿ ನಡೆದ ಬಿ.ಕಾಂ ವಿದ್ಯಾರ್ಥಿ ಯೋಗೇಶ್ (19) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಬಾಲಕರು ಸೇರಿದಂತೆ ನಾಲ್ವರನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಭುವನ್ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಶೋಧ ಮುಂದುವರಿದಿದೆ. ಸೀನಿಯರ್ ವಿದ್ಯಾರ್ಥಿನಿಯ ವಿಚಾರಕ್ಕೆ ಯೋಗೇಶ್ ಹಾಗೂ ಭುವನ್ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಸೆ.30ರಂದು ಭುವನ್ ಯೋಗೇಶ್‌ನನ್ನು ಜಿಮ್ ಬಳಿ ಕರೆಸಿಕೊಂಡು ಸಹಚರರೊಂದಿಗೆ ಸೇರಿ ಗಲಾಟೆ ನಡೆಸಿ, ಚಾಕುವಿನಿಂದ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಯೋಗೇಶ್‌ನನ್ನು ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಭುವನ್ ಮೊದಲೇ ಸಂಚು ರೂಪಿಸಿ ಚಾಕು ಖರೀದಿಸಿಕೊಂಡು ಬಂದು ಕೊಲೆ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

Share News

About BigTv News

Check Also

ಅಡುಗೆ ರುಚಿಯಾಗಿಲ್ಲವೆಂದು ಕಿರಿಕ್, ಪೇಂಟರ್ ಕೈಯಿಂದಲೇ ಕಾರ್ಪೆಂಟರ್ ಭೀಕರ ಕೊಲೆ!

ಬೆಂಗಳೂರು: ರಾಜರಾಜೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಚೇನಹಳ್ಳಿಯಲ್ಲಿ ಅಡುಗೆ ವಿಚಾರವಾಗಿ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಕಾರ್ಪೆಂಟರ್‌ವೊಬ್ಬರನ್ನು ಪೇಂಟರ್ …

Leave a Reply

Your email address will not be published. Required fields are marked *