ಕಲಬುರಗಿ: ಜಾಮೀನಿನ ಮೇಲೆ ಹೊರಗಿದ್ದ ಆರೋಪಿಗೆ ಜಾಮೀನು ರದ್ದುಪಡಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಸಿ ₹3 ಸಾವಿರ ಲಂಚ ಪಡೆದ ಆರೋಪದ ಮೇಲೆ ಸುಲೇಪೇಟ ಠಾಣೆಯ ಕಾನ್‌ಸ್ಟೆಬಲ್ ಅನಿಲ್‌ಕುಮಾರ್ ಉಳ್ಳಾಗಡ್ಡಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಮಧ್ಯವರ್ತಿಯ ಮೊಬೈಲ್‌ಗೆ ಫೋನ್‌ಪೇ ಮೂಲಕ ಹಣ ಪಾವತಿಸಲಾಗಿತ್ತು. ಗಡಿಕೇಶ್ವರದ ಚಂದ್ರಕಾಂತ್ ರಂಗನೂರ ಜಾಮೀನು ಪಡೆದಿದ್ದು, ಪ್ರತಿ ತಿಂಗಳು ಠಾಣೆಗೆ ಹಾಜರಾಗಬೇಕಿತ್ತು. ಆದರೆ ಅನಿಲ್‌ಕುಮಾರ್ ಹಣ ನೀಡುವಂತೆ ಒತ್ತಡ ಹೇರಿದ್ದರಿಂದ ಚಂದ್ರಕಾಂತ್ ಲೋಕಾಯುಕ್ತರಿಗೆ ದೂರು ನೀಡಿದ್ದರು. ಶನಿವಾರ ಅನಿಲ್‌ಕುಮಾರ್ ಸೂಚನೆಯಂತೆ ಚಂದ್ರಕಾಂತ್ ಮಧ್ಯವರ್ತಿ ಕೃಷ್ಣನ ಮೊಬೈಲ್‌ಗೆ ₹3 ಸಾವಿರ ಫೋನ್‌ಪೇ ಮಾಡಿದ್ದರು. ಬಳಿಕ ಲೋಕಾಯುಕ್ತ ಎಸ್ಪಿ ಸಿ. ಸಿದ್ದರಾಜು ನೇತೃತ್ವದಲ್ಲಿ ದಾಳಿ ನಡೆಸಿ ಕಾನ್‌ಸ್ಟೆಬಲ್‌ನನ್ನು ಬಂಧಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

