Breaking News

ಮಳೆಯಿಂದಾಗಿ ಮನೆ ಕಳೆದುಕೊಂಡವರು ಗೋಳು ಕೇಳುವರ್ಯಾರು : ಖ್ಯಾರೇ ಎನ್ನದ ಅಧಿಕಾರಿಗಳು


ಹುಬ್ಬಳ್ಳಿ : ಮಳೆ ಬಂದು ಮನೆ ಕಳೆದುಕೊಂಡವರನ್ನ ಅಧಿಕಾರಿಗಳು ಮರೆತು ಬಿಟ್ಟಿದ್ದಾರೆ. ಕುಂದಗೋಳ ತಾಲ್ಲೂಕು ಸಂಶಿ ಗ್ರಾಮದಲ್ಲಿ ಕಳೆದ ತಿಂಗಳು ಮಳೆಯಿಂದ 26 ಮನೆಗಳಿಗೆ ಹಾನಿಯಾಗಿದ್ದು, ಕಾಟಾಚಾರಕ್ಕೆ ಮನವಿ ಪಡೆದುಕೊಂಡಿದ್ದಾರೆ ಎಂದು ರೈತಸಂಘದ ಕುಂದಗೋಳ ತಾಲೂಕು ಅಧ್ಯಕ್ಷರ ಬೇಸರ ವ್ಯಕ್ತಪಡಿಸಿದರು.

ಮಳೆ ಸುರಿದು, ಮನೆಗಳು ಹಾನಿಯಾಗಿ ಒಂದು ತಿಂಗಳು ಕಳೆದಿದೆ. ಆದರೂ ಅಧಿಕಾರಿಗಳು ಖ್ಯಾರೇ ಅನ್ನುತ್ತಿಲ್ಲಾ. ಪರಿಹಾರಕ್ಕಾಗಿ ಕಳೆದ ತಿಂಗಳೇ ಅರ್ಜಿ ಸಲ್ಲಿಸಿದ್ದರು ಅಪಡೆಟ್ ಇನ್ನೂ ಮಾಡಿಲ್ಲಾ. ಪುನರ್ವಸತಿ, ಪರಿಹಾರಕ್ಕಾಗಿ ಅರ್ಜಿಸಲ್ಲಿಸಿದವ್ರಿಗೆ ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದಾರೆ‌ . ಶೀಘ್ರ ಪರಿಹಾರ ಒದಗಿಸುವಂತೆ ಗುರುಪಾದಪ್ಪ ಮನವಿ ಮಾಡಿದರು.

Share News

About BigTv News

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *