ಹುಬ್ಬಳ್ಳಿ,
ಸಿದ್ದರಾಮಯ್ಯ ಸರ್ಕಾರ ಲೋಕಾಯುಕ್ತ ಇಲಾಖೆಯನ್ನು ದುರ್ಬಲಗೊಳಿಸುವಲ್ಲಿ ಪ್ರಮುಖ ಕಾರಣಿಕರ್ತರಾಗಿದ್ದು, ಲೋಕಾಯುಕ್ತರ ಎಲ್ಲ ಶಕ್ತಿಗಳನ್ನು ಕಸೆದುಕೊಳ್ಳುವಂತ ಕೆಲಸ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಿಡಿಕಾರಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವ್ರು,
ಲೋಕಾಯುಕ್ತವನ್ನು ಅಭದ್ರ ಗೊಳಿಸಲು ಸಿದ್ದರಾಮಯ್ಯಾ ಒಂದು ಸೂಚನೆ ಹೊರಡಿಸಿ, ಲೋಕಾಯುಕ್ತರಿಗೆ ಇರುವ ಸುಪ್ರೀಂ ಪವರ್ ಕಸಿದುಕೊಂಡು ಪರ್ಯಾಯವಾಗಿ ತಮಗೆ ಅನುಕೂಗುವಾಗುವ ರೀತಿಯಲ್ಲಿ ಎಸಿಬಿ ಸಂಸ್ಥೆ ಹುಟ್ಟು ಹಾಕಿಸಿದರು ಎಂದ ಅವರು ನೇರವಾಗಿ ಸಿದ್ದರಾಮಯ್ಯಾನವರ ಅಧೀನ ಕೆಲಸ ಮಾಡುವಂತಹ ವ್ಯವಸ್ಥೆಯಲ್ಲಿ ಸಂಸ್ಥೆಯನ್ನು ಜಾರಿಗೆ ತಂದರು ಎಂದ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದರು.
ಎಸಿಬಿ ಸಿದ್ದರಾಮಯ್ಯಾನವರ ಅಧೀನದಲ್ಲಿ ಕೆಲಸ ಮಾಡುವದರಿಂದ ಇದು ಸ್ವತಂತ್ರ ವಾಗಿ ಯಾವುದೇ ಕೆಲಸ ಕಾರ್ಯ ಮಾಡಲು ಆಗಿಲ್ಲಾ, ಕೇವಲ ಅವರ ಹಿತಾಸಕ್ತಿ ಕಾಪಾಡಿಕೊಳ್ಳಲು ಹುಟ್ಟು ಹಾಕಿದ ಸಂಸ್ಥೆ ಆಗಿದೆ.
ಸಿದ್ದರಾಮಯ್ಯಾ ಮುಖ್ಯ ಮಂತ್ರಿಗಳಿದ್ದಾಗ ಅವರ ಮೇಲೆ ಸುಮಾರು ೬೦-೭೦ ಕೇಸುಗಳು ಎಸಿಬಿಯಲ್ಲಿ ದಾಖಲಾದರು ಒಂದು ಪ್ರಕರಣಕ್ಕೆ ಸರಿಯಾದ ಸಂಬಂಧಿಸಿದಂತೆ ತನಿಖೆ ಆಗಿಲ್ಲ ಎಂದು ಜಗದೀಶ್ ಶೆಟ್ಟರ್ ಗಂಭೀರ ಆರೋಪ ಮಾಡಿದರು.
ಈ ಸಲುವಾಗಿಯೇ ಲೋಕಾಯುಕ್ತ ಸ್ವತಂತ್ರವಾಗಿ ಕೆಲಸ ಮಾಡುತ್ತಿತ್ತು ಇದರಿಂದ ತಮಗೆ ಎಲ್ಲಿ ಸಮಸ್ಯೆಗಳು ಬರುತ್ತವೆ ಎಂದು ಅದರ ಅಧಿಕಾರವನ್ನು ಕಸಿದುಕೊಂಡಿದ್ದರಿಂದ ಈಗ
ಲೋಕಾಯುಕ್ತ ಹೈಕೋರ್ಟ್ ಮೊರೆ ಹೋಗಿದೆ ಮತ್ತೆ ನಮಗೆ ಮರಳಿ ಅಧಿಕಾರ ನೀಡಲು ಕೇಳಿದೆ.
ಅಲ್ಲದೇ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಾರಂಭದಲ್ಲಿ ಲೋಕಾಯುಕ್ತ ಕ್ಕೆ ಸಂಪೂರ್ಣ ಮತ್ತು ಸ್ವತಂತ್ರ ಅಧಿಕಾರವನ್ನು ನೀಡುವುದಾಗಿ ಭರವಸೆಯನ್ನು ನೀಡಿದ್ದರು. ಆದರೆ, ಇದೀಗ ಸಮ್ಮಿಶ್ರ ಸರ್ಕಾರ ೩-೪ ತಿಂಗಳಾದರೂ ಆ ಬಗ್ಗೆ ಮಾತನಾಡುತ್ತಿಲ್ಲ .ಇದರಿಂದ ಲೋಕಾಯುಕ್ತವನ್ನು ಅಭದ್ರಗೊಳಿಸುವ ಗೊಳಿಸುವುದೇ ಹುನ್ನಾರವಾಗಿದೆ.
ಈ ಎಲ್ಲ ವಿಷಯಗಳ ವಿರುದ್ಧ ಬಿಜೆಪಿ ಹೋರಾಟ ಮಾಡುತ್ತದೆ ಎಂದು ಶೆಟ್ಟರ್ ಹೇಳಿದರು.
ಜಗದೀಶ ಶೆಟ್ಟರ್, ಮಾಜಿ ಮುಖ್ಯಮಂತ್ರಿ
bigtvnews | Hubli Dharwad News | Kannada News | Karnataka News Hubli News | News In Hubli | Local news





