ಕಲಬುರಗಿಯಲ್ಲಿ ದುರಂತವೊಂದು ಸಂಭವಿಸಿದೆ. ಚಲಿಸುತ್ತಿದ್ದ ಸಾರಿಗೆ ಬಸ್‍ನಲ್ಲೇ ಹೃದಯಾಘಾತದಿಂದ ಕಂಡಕ್ಟರ್ ಸಾವನ್ನಪ್ಪಿದ್ದಾರೆ.ಕಲಬುರಗಿಯಿಂದ ಜೇವರ್ಗಿಗೆ ಬಸ್ ಹೊರಟಿತ್ತು. ಈ ವೇಳೆ ಫರಹತಾಬಾದ್ ಬಳಿ ಏಕಾಏಕಿಯಾಗಿ ಅವರು ಕುಸಿದು ಬಿದ್ದದ್ದಾರೆ. ತಕ್ಷಣ ಚಾಲಕ ಹಾಘೂ ಪ್ರಯಾಣಿಕರು ಸೇರಿ ಬಸ್‍ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿದ್ದಾರೆ. ಫರಹತಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

