ಮಾನ್ಯ ಶ್ರೀ K ಸಂತೋಷ್ ಬಾಬು, IPS ರವರು ಇಂದು ಹು-ಧಾ ನಗರ ಪೊಲೀಸ್ ಕಮೀಷನರೇಟ್ ಘಟಕದ ಆಯುಕ್ತರಾಗಿ ಹೆಚ್ಚುವರಿ ಅಧಿಕಾರ ಸ್ವೀಕರಿಸಿ ಶುಕ್ರವಾರ ಘಟಕದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು.
ಇದೇ ವೇಳೆ ಪೊಲೀಸ್ ಇಲಾಖೆಯಲ್ಲಿ ದೀರ್ಘಾವಧಿ ಸೇವೆ ಸಲ್ಲಿಸಿ ನಿವೃತ್ತರಾದ ಅಧಿಕಾರಿ- ಸಿಬ್ಬಂದಿಗಳಿಗೆ ಘಟಕದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡುಗೆ ನೀಡಿ ಅವರ ನಿವೃತ್ತಿ ಜೀವನ ಸುಖಕರವಾಗಿರಲೆಂದು ಹಾರೈಸಲಾಯಿತು.

ಈ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡಲ್ಲಿನ ಎಲ್ಲಾ ಪೋಲಿಸ್ ಠಾಣೆಯ ಪೋಲಿಸ್ ಆಧಿಕಾರಿಗಳು ಭಾಗಿಯಾಗಿದ್ದರು, ಒಟ್ಟಿನಲ್ಲಿ ನೂತನವಾಗಿ ಹುಬ್ಬಳ್ಳಿ -ಧಾರವಾಡ ಪೋಲಿಸ್ ಕಮೀಷನರ್ ಹಾಗಿ ಅಧಿಕಾರ ಪಡೆದಿರುವ ಸಂತೋಷ ಬಾಬು ಅವರು ಯಾವ ರೀತಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುತ್ತಾರೆ, ಮತ್ತು ಮುಂಬರುವ ದಿನಗಳಲ್ಲಿ ಎನು ಏನು ಕ್ರಮಕೈಳುತ್ತಾರೆ. ಎನ್ನುವದನ್ನು ಕಾದು ನೋಡಬೇಕು
bigtvnews | Hubli Dharwad News | Kannada News | Karnataka News Hubli News | News In Hubli | Local news




