ಹುಬ್ಬಳ್ಳಿ: ಕುಮಾರಸ್ವಾಮಿಯೇ ಐದು ವರ್ಷ ಸಿಎಂ ಆಗ್ತಾರೆ. 2022ಕ್ಕೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗ್ತಾರೆ. ಅವರನ್ನ ನಾವು ಸಿಎಂ ಮಾಡುತ್ತೆೇವೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಅಂದರೂ ಸಿದ್ದರಾಮಯ್ಯ ಅವರನ್ನು ನಾವು ಕರೆದುಕೊಂಡು ಬಂದು ಸಿಎಂ ಮಾಡುತ್ತೆೇವೆ ಎಂದರು.ನಮ್ಮ ಜೊತೆಯೂ ಬಿಜೆಪಿಯ ಹತ್ತು ಜನ ಶಾಸಕರು ಸಂರ್ಪಕದಲ್ಲಿದ್ದಾರೆ. ಅವರ ಸಂರ್ಪಕದಲ್ಲಿ 20 ಜನ ಇದ್ರೆ, ನಮ್ಮ ಜೊತೆನೂ 10 ಜನ ಶಾಸಕರು ಇದ್ದಾರೆ. ಅವರು ನಮ್ಮ 20 ಜನ ಶಾಸಕರ ಹೆಸರು ಬಹಿರಂಗ ಪಡಿಸಲಿ. ನಮ್ಮ ಜೊತೆ ಇರೋ ಬಿಜೆಪಿಯ ಹತ್ತು ಜನ ಶಾಸಕರ ಹೆಸರು ರಿವೀಲ್ ಮಾಡ್ತೀವಿ ಎಂದು ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಬಿಜೆಪಿಯುವರು ಸುಮ್ನೆ ಬೊಗಳೆ ಬಿಡ್ತಿದ್ದಾರೆ. 23 ಅಲ್ಲ, ಇನ್ನೂ ಎರಡೂ ದಿನ ಹೆಚ್ಚಿಗೆ ತೆಗೆದುಕೊಳ್ಳಲಿ. 25ಕ್ಕೆ ಅವರು ಸರ್ಕಾರ ರಚನೆ ಮಾಡಿದ್ರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಸರ್ಕಾರ ರಚನೆ ಮಾಡದೇ ಹೋದ್ರೆ ಬಿಎಸ್‌ವೈ ನಿವೃತ್ತಿ ತೆಗೆದುಕೊಳ್ತಾರಾ? ಎಂದು ಜಮೀರ್ ಅಹ್ಮದ್ ಖಾನ್ ಪ್ರಶ್ನಿಸಿದ್ರು.
bigtvnews | Hubli Dharwad News | Kannada News | Karnataka News Hubli News | News In Hubli | Local news





