ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ವೈಯಕ್ತಿಕ ಪರಿಚಯಸತತ ನಾಲ್ಕನೇ ಬಾರಿ ಲೋಕಸಭೆಯ ಪ್ರವೇಶ ಪಡೆದಿರೊ ಪ್ರಹ್ಲಾದ ಜೋಶಿ ಅವರು ಕೇದ್ರ ಸಚಿವರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದು, ಸಹಜವಾಗಿಯೇ ಧಾರವಾಡ ಲೋಕಸಭಾ ಕ್ಷೇತ್ರದ ಜನತಯ ಸಂತಸವನ್ನ ಇಮ್ಮಡಿಗೊಳಿಸಿದೆ. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿರೊ ಜೋಶಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಯಾವ ಖಾತೆ ಕೊಡ್ತಾರೆ ಅನ್ನೋದು ತೀವೃ ಕುತೂಹಲ ಮೂಡಿಸಿದೆ.ಹೆಸರು: ಪ್ರಹ್ಲಾದ ಜೋಶಿ.ಕ್ಷೇತ್ರ: ಧಾರವಾಡ ಲೋಕಸಭಾ ಕ್ಷೇತ್ರಪತ್ನಿಯ ಹೆಸರು: ಜ್ಯೋತಿಮಕ್ಕಳು: ಮೂವರು ಪುತ್ರಿಯರು (ಅರ್ಪಿತಾ, ಅನುಷಾ, ಅನನ್ಯಾ)ಸಂಸದರ ತಂದೆ: ವೆಂಕಟೇಶ ಜೋಶಿತಾಯಿ: ಮಾಲತಿಬಾಯಿ ಜೋಶಿಸಂಸದರ ವಿದ್ಯಾರ್ಹತೆ: ಬಿ.ಎ. (ಕೆ.ಎಸ್ ಕಲಾ ಕಾಲೇಜು, ಹುಬ್ಬಳ್ಳಿ)ಹುಟ್ಟೂರು: ವಿಜಯಪುರಹುಟ್ಟಿದ ದಿನ: 27 ನವೆಂಬರ್ 1962——————————————-2019ರ ಲೋಕಸಭೆ ಚುನಾವಣೆ ಫಲಿತಾಂಶಪ್ರಹ್ಲಾದ್ ಜೋಶಿ: ಬಿಜೆಪಿ- 6,84,837 (ಗೆಲುವಿನ ಅಂತರ: 2,05,072)ವಿನಯ ಕುಲಕರ್ಣಿ: ಕಾಂಗ್ರೆಸ್- 4,79,7652014ರ ಲೋಕಸಭಾ ಚುನಾವಣಾ ಫಲಿತಾಂಶಪ್ರಹ್ಲಾದ್ ಜೋಶಿ: ಬಿಜೆಪಿ- 5,45,395. (ಗೆಲುವಿನ ಅಂತರ: 1,13,657)ವಿನಯ ಕುಲಕರ್ಣಿ: ಕಾಂಗ್ರೆಸ್- 4,31,738ಹನುಮಂತಪ್ಪ ಬಂಕಾಪುರ: ಜೆಡಿಎಸ್- 88362009ರ ಚುನಾವಣಾ ಫಲಿತಾಂಶಪ್ರಹ್ಲಾದ್ ಜೋಶಿ: ಬಿಜೆಪಿ- 4,46,786. (ಗೆಲುವಿನ ಅಂತರ: 1,37,063)ಮಂಜುನಾಥ್ ಕುನ್ನೂರ್: ಕಾಂಗ್ರೆಸ್- 3,09,123ಮಹೇಶ ತಳಕಲ್ಲಮಠ: ಎನ್.ಸಿ.ಪಿ- 71762004ರ ಚುನಾವಣಾ ಫಲಿತಾಂಶಪ್ರಲ್ಹಾದ್ ಜೋಶಿ: ಬಿಜೆಪಿ- 3,85,084 (ಗೆಲುವಿನ ಅಂತರ: 56,078)ಬಿ.ಎಸ್. ಪಾಟೀಲ್: ಕಾಂಗ್ರೆಸ್- 3,02,0061999ರ ಚುನಾವಣಾ ಫಲಿತಾಂಶಡಾ. ವಿಜಯ ಸಂಕೇಶ್ವರ್: ಬಿಜೆಪಿ- 3,45,197ವೀರಣ್ಣ ಮತ್ತಿಕಟ್ಟಿ: ಕಾಂಗ್ರೆಸ್- 3,03,595ಗೆಲುವಿನ ಅಂತರ: 41,6021998ರ ಚುನಾವಣಾ ಫಲಿತಾಂಶಡಾ. ವಿಜಯ ಸಂಕೇಶ್ವರ್: ಬಿಜೆಪಿ- 3,39,660ಡಿ.ಕೆ. ನಾಯ್ಕರ್: ಕಾಂಗ್ರೆಸ್- 2,89,260ಗೆಲುವಿನ ಅಂತರ: 50,400——————————————ಅಭಿವೃದ್ಧಿ ಕೆಲಸಗಳು1) ಸಂಸದ ಪ್ರಹ್ಲಾದ್ ಜೋಶಿಯವರು ಕೇಂದ್ರದಿಂದ ಸ್ಮಾರ್ಟ್ಸಿಟಿ, ಐಐಟಿ ಮತ್ತು ಏಮ್ಸ್ ಹುಬ್ಬಳ್ಳಿ- ಧಾರವಾಡಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.2) ಸಾವಿರಾರು ಕೋಟಿ ರೂಪಾಯಿ ಸಿಆರ್ಎಫ್ ಅನುದಾನ ತಂದು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು ಹಾಗೂ ನಗರ ರಸ್ತೆಗಳನ್ನು ಅಭಿವೃದ್ಧಿ ಮಾಡಿದ್ದಾರೆ.3) ಹುಬ್ಬಳ್ಳಿ ವಿಮಾನ ನಿಲ್ದಾಣ ಅಂತರಾಷ್ಟ್ರೀಯ ಮಟ್ಟದ ಮೇಲ್ದರ್ಜೆಗೆ ಏರಿಸಲು ವಿಶೇಷ ಅನುದಾನ ತಂದಿದ್ದಾರೆ.4) ಹುಬ್ಬಳ್ಳಿ ರೈಲ್ವೇ ನಿಲ್ದಾಣ ಮತ್ತು ವರ್ಕ್ಶಾಪ್ ಅಧುನೀಕರಣ ಹಾಗೂ ಗುಡ್ಶೆಡ್ ನಿರ್ಮಾಣ.5) ಐವತ್ತು ಹಾಸಿಗೆಗಳ ರಾಜ್ಯ ಕಾರ್ಮಿಕ ವಿಮಾ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲು ಶ್ರಮಿಸಿದ್ದಾರೆ.6) ಕ್ಲೀನ್ ಇಮೇಜ್ ಮತ್ತು ಸುಲಭ ಲಭ್ಯತೆಯ ಕಾರಣ ಜನರಲ್ಲಿ ಉತ್ತಮ ಅಭಿಪ್ರಾಯವಿದೆ. ಕಳೆದ ಚುನಾವಣೆಗೂ ಮುನ್ನ ನೀಡಿದ್ದ ಬಹುತೇಕ ಭರವಸೆಗಳನ್ನು ಈಡೇರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





