ಚಾಮರಾಜನಗರ: ಮಲೆ ಮಹದೇಶ್ವರ ಸ್ವಾಮಿ ಹೆಸರಿನ ಫೇಸ್ ಬುಕ್ ಪೇಜ್ ಹ್ಯಾಕ್ ಮಾಡಿ ಮಹಿಳೆಯರ ಅಶ್ಲೀಲ ವಿಡಿಯೋಗಳನ್ನು ಪೋಸ್ಟ್ ಮಾಡಿ ವಿಕೃತಿ ಮೆರೆಯಲಾಗಿದೆ. ಘಟನೆ ಸಂಬಂಧ ಪೇಜ್ ಅಡ್ಮಿನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
2013ರಲ್ಲಿ ಕೊಳ್ಳೆಗಾಲದ ಸಂಜಯ್ ಎಂಬುವರು ಕ್ರಿಯೇಟ್ ಮಾಡಿದ್ದ ಮಹದೇಶ್ವರ ಸ್ವಾಮಿ ಫೇಸ್ಬುಕ್ ಪೇಜ್ನಲ್ಲಿ ಮಹದೇಶ್ವರ ಸ್ವಾಮಿ ಮಹಿಮೆ, ಪೂಜೆ ಪುನಸ್ಕಾರಗಳ ಮಾಹಿತಿಯನ್ನ ಅಪ್ಲೋಡ್ ಮಾಡಿ ಭಕ್ತರಿಗೆ ಮಾಹಿತಿ ನೀಡಲಾಗಿತ್ತು.
ಈ ಪೇಜ್ಗೆ ಸುಮಾರು 17 ಸಾವಿರ ಹಿಂಬಾಲಕರಿದ್ದು, ಸದ್ಯ ಫೇಸ್ಬುಕ್ ಪೇಜ್ಅನ್ನು ಹ್ಯಾಕ್ ಮಾಡಿ ಪುಟದ ಸ್ಟೇಟಸ್ಗಳಲ್ಲಿ ಪೋರ್ನ್ ವಿಡಿಯೋಗನ್ನು ಅಪ್ಲೋಡ್ ಮಾಡಿ ವಿಕೃತಿ ಮೆರೆಯಲಾಗಿದೆ. ಆ ಮೂಲಕ ಮಹದೇಶ್ವರನ ಭಕ್ತರ ಭಾವನೆಗಳಿಗೆ ಧಕ್ಕೆ ತರುವ ಕೆಲಸವನ್ನು ಮಾಡಿದ್ದಾರೆ.
ಈ ಕುರಿತಂತೆ ಮಾಹಿತಿ ಗೊತ್ತಾಗುತ್ತಿದ್ದಂತೆ ಚಾಮರಾಜನಗರ ಸೆನ್ ಠಾಣೆಯಲ್ಲಿ ಸಂಜಯ್ ಅವರು ದೂರು ದಾಖಲಿಸಿದ್ದಾರೆ. ಆದರೆ ಪೊಲೀಸರು 30 ಜನರಿಂದ ಪೇಜ್ ಬಗ್ಗೆ ರಿಪೋರ್ಟ್ ಮಾಡಿಸಲು ಹೇಳಿ ಸುಮ್ಮನಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸದ್ಯ ಪೇಜ್ ಅಡ್ಮಿನ್ ಸಂಜಯ್ ಪೇಜ್ಅನ್ನು ಕಂಟ್ರೋಲ್ ಮಾಡಲು ಸಾಧ್ಯವಾಗದಂತೆ ಹ್ಯಾಕರ್ಗಳು ಮಾಡಿದ್ದು, ಏನೂ ಮಾಡಲಾಗದ ಸ್ಥಿತಿಯಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

