ಹುಬ್ಬಳ್ಳಿ: ಬಳ್ಳಾರಿ ಜಿಲ್ಲೆ ಸೊಂಡುರು ತಾಲೂಕಿನ ತೊರಣಗಲ್ಲಿ, ಕುರೆಕುಪ್ಪೆ, ಮುಸಿನಾಯಕನಹಳ್ಳಿ, ಯರಬನಹಳ್ಳಿಯಲ್ಲಿರುವಬೆಲೆ ಬಾಳುವ 3667 ಎಕರೆ ಭೂಮಿಯನ್ನು ರಾಜ್ಯ ಮೈತ್ರಿ ಸರ್ಕಾರದ ಸಿಎಂ ಕುಮಾರಸ್ವಾಮಿ ನೇತೃತ್ವದ ಸಚಿವ ಸಂಪುಟ ಜೆ ಎಸ್ ಡಬ್ಲೂ ಸ್ಟೀಲ್ ಕಂಪನಿಗೆ ಮಾರಾಟ ಮಾಡಲು ನಿರ್ಧಾರ ಕೈಗೊಂಡಿರುವುದು ಸಮಂಜಸವಲ್ಲ ಈ ನಿರ್ಧಾರವನ್ನು ಶೀಘ್ರವಾಗಿ ಕೈ ಬಿಡಬೇಕು ಎಂದು ಸಮಾಜ ಪರಿವರ್ತನಾ ಸಮಿತಿಯ ಮುಖಂಡರಾದ ಎಸ್.ಆರ್.ಹಿರೇಮಠ ಆಗ್ರಹಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸಚಿವ ಸಂಪುಟ ಈ ನಿರ್ಧಾರ ಕೈಗೂಳ್ಳುತ್ತಿರುವುದು ಸರಿಯಲ್ಲ ಜನರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಈ ನಿರ್ಧಾರವನ್ನು ಶೀಘ್ರವಾಗಿ ಕೈ ಬಿಡಬೇಕು ಎಂದರು. ಈ ಹಿಂದೆ ಸಮಾಜ ಪರಿವರ್ತನಾ ಸಮಿತಿ ಸುಪ್ರೀಂ ಕೋರ್ಟನಲ್ಲಿ w.p 562/09 ಹಾಕಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕೇಸನಲ್ಲಿ ಇದೇ ಆದೇಶವನ್ನು ತಳ್ಳಿ ಹಾಕಿದ್ದರು ಎಂದು ಅವರು ಹೇಳಿದರು. ಇತ್ತೀಚಿನ ನಡೆದ ಸಂಪುಟ ಸಭೆಯಲ್ಲಿ 3667 ಎಕರೆ ಭೂಮಿಯನ್ನು ಕೇವಲ 1.22 ಲಕ್ಷ ರೂಪಾಯಿಗೆ ಜಿಂದಾಲ ಸಂಸ್ಥೆಗೆ ಮಾರಟ ಮಾಡಲು ಕೈಗೊಂಡಿರುವ ನಿರ್ಧಾರ ತುಂಬಾ ಆತಂಕಕಾರಿಯಾಗಿದ್ದು, ಇದು ರಾಜ್ಯದ ಬೊಕ್ಕಸಕ್ಕೆ ಹಾನಿ ಉಂಟು ಮಾಡುವ ನಡೆಯಾಗಿದೆ ಇಂತಹ ಅವ್ಯವಸ್ಥಿತ ನಿರ್ಧಾರವನ್ನು ಶೀಘ್ರವಾಗಿ ಕೈ ಬಿಡಬೇಕು ಎಂದು ಅವರು ಆಗ್ರಹಿಸಿದರು. ಈಗಾಗಲೇ ಶಾಸಕ ಎಚ್.ಕೆ.ಪಾಟೀಲ ಅವರು,ಮೇ 27ರಂದು ಸಿಎಂ ಕುಮಾರಸ್ವಾಮಿ ಅವರಿಗೆ ಪತ್ರ ಬರೆದು ಸರ್ಕಾರಕ್ಕೆ ಕಣ್ಣು ತೆರೆಸಿದ್ದಾರೆ.ಅಲ್ಲದೇ ಜಿಂದಾಲ ಸಂಸ್ಥೆ ಸರ್ಕಾರಕ್ಕೆ ತೆರಿಗೆ ಕಟ್ಟದೇ ಸರ್ಕಾರಕ್ಕೆ ಮೋಸ ಮಾಡುತ್ತಿದೆ ಎಂದು ಅವರು ಹೇಳಿದರು. ಸರ್ಕಾರಿ ಅಡ್ವೋಕೆಟ್ ಜನರಲ್ ಇದರ ಬಗ್ಗೆ ಪಾರದರ್ಶಕ ಅಭಿಪ್ರಾಯ ಕೊಡುವ ಬದಲು ಸರ್ಕಾರ ದಾರಿ ತಪ್ಪಿಸುವ ಅಭಿಪ್ರಾಯ ಕೊಟ್ಟಿರುವುದು ದುರಾದೃಷ್ಟಕರ ಸಂಗತಿಯಾಗಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





