ಚಿಕ್ಕೋಡಿ: ದುಷ್ಕರ್ಮಿಗಳು ಮೂರು ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿರುವ ಪ್ರಕರಣ ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದ ಶಂಕರ ನಗರದಲ್ಲಿ ನಡೆದಿದೆ.
ಬೆಂಕಿ ನೋಡಿ ಗಾಬರಿಯಾದ ವಾಹನ ಮಾಲೀಕ ಆಗ್ನಿ ಶಾಮಕ ದಳಕ್ಕೆ ಕರೆ ಮಾಡಿದ್ದಾರೆ.
ಆದರೆ ಅಗ್ನಿಶಾಮಕ ಸಿಬ್ಬಂದಿ ತಡವಾಗಿ ಸ್ಥಳಕ್ಕೆ ಆಗಮಿಸಿದ್ದರಿಂದ ಒಂದು ಹೋಂಡಾ ಶೈನ್ 1 ಪಲ್ಸರ್ ಸೇರಿದಂತೆ ಎಚ್ಎಫ್ ಡಿಲಕ್ಸ್ ಅಗ್ನಿಗೆ ಆಹುತಿಯಾಗಿದೆ.
ಎ ಕೆ ದೊಡ್ಡನವರ್ ,ವಿನೋದ್ ಕುಮಾರ್ ದೊಡ್ಡನವರ್, ರಾಮು ಬಾಡಗಿ ಎಂಬುವವರಿಗೆ ಸೇರಿದ ದ್ವಿಚಕ್ರ ವಾಹನಗಳು ಇವಾಗಿವೆ.
ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





