ಉತ್ತರ ಕರ್ನಾಟಕದ ಕೇಲವು
ಭಾಗಗಳಲ್ಲಿ ಅಧಿಕ ಪ್ರಮಾಣ ಉಷ್ಣಾಂಶ ಕಂಡು ಬಂದರೇ ಅತ್ತ ಮರುಭೂಮಿ ರಾಜ್ಯ
ರಾಜಸ್ತಾನ ಕಳೆದ ಆರು ದಿನಗಳಿಂದ ಅತ್ಯಧಿಕ ತಾಪಮಾನದಿಂದ ಹೈರಾಣಾಗಿದೆ. ಈ ರಾಜ್ಯದ ಚುರು
ಪ್ರದೇಶದಲ್ಲಿ 50.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡುಬಂದಿದ್ದು, ಭಾರತದ ಸಾರ್ವಕಾಲಿಕ ತಾಪಮಾನದ ದಾಖಲೆಯಾಗಿದೆ. ಬಿಸಿಲ ಬೇಗೆಯಿಂದ ಜನ
ಕಂಗಲಾಗಿದ್ದು, 2016ರ ಮೇ 19ರಂದು ಚುರುವಿನಲ್ಲಿ ದಾಖಲಾಗಿದ್ದ 50.2 ಡಿಗ್ರಿ ಸೆಲ್ಸಿಯಸ್ ತಾಪಮಾನ ಭಾರತದಲ್ಲಿನ ಅತ್ಯಧಿಕ
ಉಷ್ಣಾಂಶವಾಗಿತ್ತು. ಕಳೆದ ಎರಡು ದಿನಗಳಲ್ಲಿ ಈ ಪ್ರದೇಶದಲ್ಲಿ ಮಕ್ರ್ಯೂರಿ ಲೆವೆಲ್ 50.8 ಡಿಗ್ರಿ ಸೆಲ್ಸಿಯಸ್‍ಗೆ ಏರಿದ್ದು, ಹೊಸ ದಾಖಲೆಯಾಗಿದೆ ಎಂದು ಜೈಪುರ ಹವಾಮಾನ ಇಲಾಖೆ ತಿಳಿಸಿದೆ. ಅತ್ಯಧಿಕ ಉಷ್ಣಾಂಶ
ದಾಖಲಾಗಿರುವ ಚುರು ಸೇರಿದಂತೆ ರಾಜ್ಯದ ಪೂರ್ವ ಭಾಗದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಜನರು
ಬೆಳಗ್ಗೆ 11 ರಿಂದ ಸಂಜೆ 4ರವರೆಗೆ ಬಿಸಿಲಿನಲ್ಲಿ ಸಂಚರಿಸದಂತೆ ಎಚ್ಚರಿಕೆ ನೀಡಲಾಗಿದೆ.
ಈ ಭಾಗಗಳಲ್ಲಿ ಉಷ್ಣಾಂಶ ಮುಂದುವರಿದಿದ್ದು, ಬಿಸಿಲ ತಾಪ ಮತ್ತು ಧಗಧಗಿಸುವ ಧಗೆಯಿಂದ ಜನರು ಅಸ್ವಸ್ಥಗೊಂಡಿದ್ಧಾರೆ. ಚುರು, ಜೈಸಲ್ಮೇರ್, ಬರ್ಮೆರ್, ನಾಗೌರ್, ಬೈಕನೆರ್ ಹನುಮಾನ್‍ಗಢ್, ಜೋಧ್‍ಪುರ್, ಜಲೋರ್ ಮತ್ತು ಪಲಿ ಜಿಲ್ಲೆಗಳಲ್ಲಿ ಜೂ.4ರವರೆಗೂ ಇದೇ ರೀತಿಯ ಅತ್ಯಧಿಕ ಉಷ್ಣ ಹವೆಯೊಂದಿಗೆ ಬಿಸಿಗಾಳಿ
ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಿಸಿಲ ಬೇಗೆಯಿಂದ ಕೆಲ ಕಾಯಿಲೆಗಳು ಬರುವ
ಸಾಧ್ಯತೆಯ ಹಿನ್ನೆಲೆಯಲ್ಲಿ ಕಟ್ಟೆಚ್ಚರವಾಹಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





