ದೆಹಲಿ: ಅಧಿಕಾರ
ಸ್ವೀಕಾರ ಮಾಡಿ ಕೇವಲ ಕೇಲವೇ ದಿನಗಳಲ್ಲಿ ದೇಶದ ಭದ್ರತೆ ಕುರಿತಾಗಿ ರಾಜನಾಥ್ ಸಿಂಗ್ ಮಾಹತ್ವದ ಹೆಜ್ಜೆ
ಇಟ್ಟಿದ್ದಾರೆ. ಇದರ ಹಿನ್ನೆಲೆಯಲ್ಲಿ ನಾಳೆ ದೇಶದ ನೂತನ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಿಯಾಚಿನ್ ನೀರ್ಗಲು ಪ್ರದೇಶಕ್ಕೆ ಭೆಟಿ ನೀಡಿ ಅಲ್ಲಿನ ಭದ್ರತೆಯ
ಬಗ್ಗೆ ಪರೀಶೀಲನೆ ನಡೆಸಲಿದ್ದಾರೆ. ಸಚಿವರೊಂದಿಗೆ ಕೆಲ ಪ್ರಮುಖ ಅಧಿಕಾರಿಗಳು ಸಹ ಭೇಟಿ ನೀಡಲಿದ್ದಾರೆ.
ಈ ಪ್ರದೇಶ ಜಗತ್ತಿನ ಅತೀ ಎತ್ತರದ ಸಮರ ಪ್ರದೇಶವಾಗಿದೆ. ಇಂತಹ ಪ್ರದೇಶದಲ್ಲಿ ಗಡಿ ಕಾಯುತ್ತಿರುವ ನಮ್ಮ
ವೀರ ಯೋದರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ಸಹ ಪರೀಶಿಲನೆ ನಡೆಸಲಾಗುವುದು.
ಸಿಯಾಚಿನ್ ಸೇನಾ
ನೆಲೆಯ ಮೂಲ ಶಿಬಿರಗಳು ಸಮುದ್ರ ಮಟ್ಟಕ್ಕಿಂತ 12 ಸಾವಿರ ಅಡಿಗಳಿಂದ ಆರಂಭಗೊಂಡು 23 ಸಾವಿರ ಅಡಿಗಳವರೆಗೆ
ಹಬ್ಬಗೊಂಡಿದೆ. ಚಳಿಗಾಲದಲ್ಲಿ ಈ ಪ್ರದೇಶದಲ್ಲಿ ಉಷ್ಣಾಂಶ ಮೈನಸ್ 70 ಡಿಗ್ರಿ ಸೆಲ್ಸಿಯಸ್ ಕುಸಿಯಲಿದೆ
ಎಂದು ಹೇಳಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





