ಕಲುಷಿತ ಸೇಂದಿ ಸೇವಿಸಿ 12 ಜನ ಕಾರ್ಮಿಕರು ಅಸ್ವಸ್ಥಗೊಂಡ ಘಟನೆ ಆಂಧ್ರದ ಕಮ್ಮವಾರಪಳ್ಳಿಯಲ್ಲಿ ನಡೆದಿದೆ. ನಿನ್ನೆ
ರಾತ್ರಿ ಬಾಗೇಪಲ್ಲಿ ತಾಲ್ಲೂಕಿನ ಗುಟ್ಟೆ ಪಾಳ್ಯ ನಿವಾಸಿಗಳು ಕಲುಷಿತ ಸೇಂದಿ ಸೇವಿಸಿದ್ದರು. ನಂತರ ಕುಡಿದ ಅಷ್ಟು ಜನರು ವಾಂತಿ ಭೇದಿಯಿಂದ ಒದ್ದಾಡುತ್ತಿದ್ದರು. ಕೂಡಲೇ
ಸ್ಥಳಿಯರ ಸಹಾಯದಿಂದ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ವೈಧ್ಯರ ವರಧಿ ಪ್ರಕಾರ ಸೇಂದಿ ಸೇವನೆಯಿಂದಲ್ಲೆ ಆರೋಗ್ಯದಲ್ಲಿ
ಏರುಪೇರಾಗಿರುವುದಾಗಿ ತಿಳಿಸಿದ್ದಾರೆ. ಈ ಕುರಿತು . ಆಂಧ್ರದ ಅಮಡಗೂರು ಪೊಲೀಸ್ ಠಾಣೆ ವ್ಯಾಪ್ತಿ ಪ್ರಕರಣ ದಾಖಲಾಗಿದೆ. ಅದೃಷ್ಟವಶ ಯಾವುದೇ ಪ್ರಾಣಾಪಾಯ ಸಂಬವಿಸಿಲ್ಲ.
bigtvnews | Hubli Dharwad News | Kannada News | Karnataka News Hubli News | News In Hubli | Local news





