Breaking News

ಚುನಾವಣೆ ಮುಗಿದರು ಬಸ್‌ ಟಿಕೇಟನಲ್ಲಿ ನಿಲ್ಲದ ಮತದಾನ ಜಾಗೃತಿ

ಲೋಕಸಭಾ ಚುನಾವಣೆ ಮುಗಿದು ಕೇಂದ್ರ ಸರಕಾರದ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದಾಯ್ತು.ಆದರೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮಾತ್ರ “ಮತದಾನ ನಮ್ಮ ಹಕ್ಕು, ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ಮತ ಚಲಾಯಿಸಿ”ಎನ್ನುವ ಮೂಲಕ ಜಾಗೃತಿ ನೀಡುತ್ತಿದೆ. ಕೆಲವು ಬಸ್‌ಗಳಲ್ಲಿ ನೀಡುವ ಟಿಕೇಟ್‌ ನಲ್ಲಿ ಜಾಗೃತಿ ಮೂಡಿಸುತ್ತಿದೆ.
ಹೌದು.ಲೋಕಸಭಾ ಚುನಾವಣೆಗೆ ಮತದಾರರನ್ನು ತಪ್ಪದೆ ಮತದಾನ ಮಾಡುವಂತೆ ಚುನಾವಣಾ ಆಯೋಗ ಮಹತ್ವ ನೀಡುವ ಮೂಲಕ ನಿತ್ಯವೂ ಹಲವಾರು ರೀತಿಯಲ್ಲಿ ಜಾಗೃತಿ ಅಭಿಯಾನದ ಮೂಲಕ ಗಮನ ಸೆಳೆದ್ದಿತು.ಅದೇ ರೀತಿಯಲ್ಲಿ ಧಾರವಾಡ ಜಿಲ್ಲೆಯಲ್ಲಿಯೂ ಜಿಲ್ಲಾ ಸ್ವೀಪ್ ಸಮಿತಿಯಿಂದಲೂ ಹಲವಾರು ರೀತಿಯಲ್ಲಿ ಮತದಾರರ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಅದೇ ರೀತಿ ಹುಬ್ಬಳ್ಳಿ ಧಾರವಾಡ ನಗರಗಳಲ್ಲಿ ಸಂಚರಿಸುವ ಸಾರಿಗೆ ಸಂಸ್ಥೆ ಕೆ.ಎಸ್.ಆರ್.ಟಿಸಿ ಬಸ್ ನ ಪ್ರಯಾಣಿಕರಿಗೆ ಮತದಾನ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಕಳೆದ 4 ತಿಂಗಳಿನಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೆ.ಎಸ್‌.ಆರ್‌.ಟಿ.ಸಿ ಬಸ್‌ಗಳಲ್ಲಿ ಪ್ರಯಾಣಿಕರಿಗೆ ನೀಡುವ ಟಿಕೆಟ್‌ಗಳ ಮೇಲೆಮತದಾನ ನಮ್ಮ ಹಕ್ಕು, ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ಮತ ಚಲಾಯಿಸಿ” ಎನ್ನುವ ಘೋಷ ವಾಕ್ಯದೊಂದಿಗೆ ಪ್ರತಿಯೊಬ್ಬ ಪ್ರಯಾಣಿಕರಿಗೆ ನೀಡುವ ಮೂಲಕ ಗಮನ ಸೆಳೆದಿತ್ತು.
ಆದರೆ ಚುನಾವಣೆ ಮುಗಿದು,ಫಲಿತಾಂಶ ಬಂದರೂ ಪ್ರಯಾಣಿಕರಿಗೆ ತಪ್ಪದೇ ಮತ ಚಲಾವಣೆ ಮಾಡಿ ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಟಿಕೇಟ್ ಮುದ್ರಣ ಮಾಡಿದೆ.”ಮತದಾನ ನಮ್ಮ ಹಕ್ಕು, ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ಮತ ಚಲಾಯಿಸಿ” ಎಂದು ಹೇಳುತ್ತಿದ್ದೆಚುನಾವಣೆಯ ಮತದಾನ ಮುಗಿದು, ಫಲಿತಾಂಶ ಬಂದರೂ ಎಚ್ಚೆತ್ತುಕೊಳ್ಳೊದ ಅಧಿಕಾರಿಗಳು,ಪ್ರಯಾಣಿಕರಿಗೆ ಲೋಕಸಭಾ ಚುನಾವಣೆಯ ಮತದಾನದ ಜಾಗೃತಿ ಮೂಡಿಸಿದ್ದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಚುನಾವಣೆ ಬಳಿಕ ಟಿಕೆಟ್ ನಲ್ಲಿ ಬದಲಾವಣೆ ಮಾಡಬೇಕಾದ ಅಧಿಕಾರಿಗಳಿಂದ ನಿಷ್ಕಾಳಜಿ ತೋರುತ್ತಿದ್ದಾರೆ.

Share News

About admin

Check Also

Featured Video Play Icon

ವಿಮಾನ ನಿಲ್ದಾಣದಲ್ಲಿ ಹೆಚ್ಚಿದ ಭದ್ರತೆ: ಪ್ರಯಾಣಿಕರ ತಪಾಸಣೆಗೆ ಆದ್ಯತೆ..!

ಹುಬ್ಬಳ್ಳಿ: ದೆಹಲಿಯ ಕೆಂಪುಕೋಟೆ ಬಳಿ ಕಾರ್ ಸ್ಫೋಟ ಘಟನೆಯ ನಂತರ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.ಬ್ಯೂರೊ ಆಫ್ ಸಿವಿಲ್ …

Leave a Reply

Your email address will not be published. Required fields are marked *