ಜನರು ತಮ್ಮ ರಕ್ಷಣೆಗಾಗಿ ದೇವರ ಮೊರೆ ಹೋಗೋದು ಕಾಮನ್. ಆದರೆ ಇಲ್ಲೊಬ್ಬ ನಿವೃತ್ತ ಪೊಲಿಸ್ ಅಧಿಕಾರಿ ದೇವರ ರಕ್ಷಣೆಗಾಗಿ ಜನರ ಮೊರೆ ಹೋಗಿದ್ದಾನೆ. ತನ್ನ ದೇವರನ್ನ ರಕ್ಷಿಸಿ ಕೊಡಿ ಎಂದು ಅಂಗಲಾಚುತಿದ್ದಾನೆ. ತನ್ನ ಆರಾಧ್ಯ ದೇವತೆ ” ಸಂತೋಷಿ ಮಾತೆ”ಯನ್ನ ಕಾಪಾಡಿ ಎಂದು ಬಿಕ್ಕಿ ಬಿಕ್ಕಿ ಅಳುತಿದ್ದಾನೆ. ಅಂದಹಾಗೆ ಈ ಅಪರೂಪದ ಘಟನೆ ನಡೆದಿರೋದು ತುಮಕೂರು ಜಿಲ್ಲೆ ತಿಪಟೂರಿನ ಆದಿನಾಯಕನಹಳ್ಳಿಯಲ್ಲಿ. ನಿವೃತ್ತ ಎ.ಎಸ್.ಐ ರಾಮ್ ಪ್ರಸಾದ್ ಎನ್ನುವವರೇ ದೇವರ ರಕ್ಷಣೆಗಾಗಿ ಜನರಲ್ಲಿ ಮೊರೆ ಇಟ್ಟವರು. ರಾಮ್ ಪ್ರಸಾದ್ ಸಂತೋಷಿ ಮಾತೆಯ ಅಪ್ಪಟ ಭಕ್ತರು. ಸಂತೋಷಿ ಮಾತೆಯ ಕೃಪೆಯಿಂದಲೇ ಸರ್ಕಾರಿ ಕೆಲಸ ಪಡೆದಿದ್ರಂತೆ. ಹಾಗಾಗಿ ತಮ್ಮ ಸಂಬಳದ ಬಹುಪಾಲು ಹಣವನ್ನು ವಿನಿಯೋಗಿಸಿ ಸಂತೋಷಿ ಮಾತೆಯ ದೇವಸ್ಥಾನ ಕಟ್ಟಿದ್ರು. ಆದರೀಗ ದೇವಸ್ಥಾನ ತಮಗೆ ಸೇರಿದ್ದು ಅಂತಾ ದಾಯಾದಿ ಅರುಣ್ ಕುಮಾರ್ ಕ್ಯಾತೆ ತೆಗೆದಿದ್ದಾರಂತೆ. ನಕಲಿ ದಾಖಲೆ ಸೃಷ್ಟಿಸಿಕೊಂಡು ಬೆದರಿಕೆ ಹಾಕುತಿದ್ದಾನಂತೆ. ಅಲ್ಲದೇ ಪೊಲೀಸರಿಗೂ ಛೂ ಬಿಟ್ಟು ದೌರ್ಜನ್ಯ ಎಸಗುತಿದ್ದಾರಂತೆ. ನಿವೃತ ಪೊಲೀಸ್ ಅಧಿಕಾರಿಯಾದರೂ ತನಗೆ ಪೊಲೀಸರಿಂದ ರಕ್ಷಣೆ ಇಲ್ಲ. ತನ್ನ ಆರಾಧ್ಯ ದೇವತೆಯ ದೇವಸ್ಥಾನವನ್ನು ಕಬಳಿಸಲು ಹೊಂಚುಹಾಕುತಿದ್ದಾರೆ ಎಂದು ಅಳಲನ್ನು ತೋಡಿಕೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





