ಯುವಕನೊಬ್ಬ ಪ್ರೀತಿಸಿ ಮದುವೆಯಾದ ಯುವತಿಯನ್ನು ಹುಬ್ಬಳ್ಳಿಗೆ ಕರೆದುಕೊಂಡು ಬಂದು ಕೈಕೊಟ್ಟು ಹುಬ್ಬಳ್ಳಿಯಲ್ಲಿಯೇ ಬಿಟ್ಟು ಪರಾರಿಯಾಗಿರುವ ಘಟನೆ ಇತ್ತೀಚಿಗೆ ಬೆಳಕಿಗೆ ಬಂದಿದೆ. ಕಳೆದ ಎರಡು ವರ್ಷ ದಿಂದ ಯುವತಿಯನ್ನು ಲವ್ ಮಾಡುತ್ತಿದ್ದ ನವಲಗುಂದ ನಿವಾಸಿ ಕಲ್ಮೇಶ ಬೋರಶೆಟ್ಟಿ ಎಂಬುವ ಯುವಕ ಕಾಡಿ ಬೇಡಿ ಯುವತಿಯನ್ನ ಲವ್ ಮಾಡಿದ್ದ. ಮದುವೆಯಾಗುವದಾಗಿ ನಂಬಿಸಲಿಕ್ಕೆ ವಿಷ ಸಹಿತ ಕುಡಿದಿದ್ದ. ಅಲ್ಲದೇ ಬೇರೆ ಹುಡುಗರ ಜತೆಗೆ ಯುವತಿ ಮದುವೆಯಾಗಲು ಬಿಡುತ್ತಿರಲಿಲ್ಲ ಎಂಬುವಂತ ಮಾಹಿತಿಯನ್ನು ನೊಂದ ಯುವತಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.ಘಟನೆ ಹಿನ್ನೆಲೆ: ಯುವತಿಯನ್ನು ಕಾಡಿ ಬೇಡಿ ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ಪ್ರೀತಿಯ ನಾಟಕವಾಡಿ ಮೋಸ ಮಾಡಿದ್ದಾನೆ. ತಿರುಪತಿಗೆ ಕರೆದೊಯ್ದು ಯುವತಿಗೆ ತಾಳಿ ಕಟ್ಟಿದ್ದು, ಮದುವೆಯಾಗಿ ಎರಡು ದಿನ ಲಾಡ್ಜ್ ನಲ್ಲಿ ಯುವತಿಯೊಂದಿಗೆ ತಂಗಿದ್ದಾನೆ. ಬಳಿಕ ಯುವತಿಯನ್ನ ಹುಬ್ಬಳ್ಳಿ ಗೆ ಕರೆ ತಂದು ಬಿಟ್ಟು ಪರಾರಿಯಾಗಿದ್ದಾನೆ. ಯುವಕನ ಮೊಬೈಲ್ ಸ್ವಿಚ್ಚಡ್ ಆಫ್ ಆಗಿದೆ. ಮದುವೆಗೆ ಯುವಕನ ಮನೆಯವರಿಂದ ವಿರೋಧ ಇತ್ತು ಎಂಬುದು ಕೂಡ ಬೆಳಕಿಗೆ ಬಂದಿದೆ. ಅಲ್ಲದೇ ತಾಯಿಯ ವಿರೋಧಕ್ಕೆ ಮದುವೆಯಾದ ಯುವತಿಯನ್ನ ಯುವಕ ಕೈ ಬಿಟ್ಟಿದ್ದಾನೆ. ಯುವಕನ ತಾಯಿ ನವಲಗುಂದ ತಾಲೂಕ ಜೆಡಿಎಸ್ ಘಟಕದ ಅಧ್ಯಕ್ಷೆ, ಶಿವಲೀಲಾ ಬೋರಶೆಟ್ಟಿ. ರಾಜಕೀಯ ಒತ್ತಡದಿಂದ ನವಲಗುಂದ ಪೋಲಿಸರು ಪ್ರಕರಣ ದಾಖಲು ಮಾಡಿಕೊಳ್ಳಲು ಹಿಂದೇಟು ಹಾಕಿದ್ದಾರೆ ಎಂದು ಕೂಡ ಶಂಕಿಸಲಾಗಿದೆ. ಪ್ರಕರಣ ದಾಖಲಾಗದಂತೆ ಶಿವಲೀಲಾ ಬೋರಶೆಟ್ಟಿ ಪೋಲಿಸರ ಮೇಲೆ ಒತ್ತಡ ಹೇರಿದ್ದಾರೆ ಎಂಬುದು ಕೂಡ ಗಮನಾರ್ಹ ಸಂಗತಿಯಾಗಿದೆ. ಹುಡುಗನಿಗಾಗಿ ಯುವತಿ ಕಾವೇರಿಯಿಂದ ಸೋಸಿಯಲ್ ಮಿಡಿಯಾದಲ್ಲಿ ಮನವಿ ಮಾಡಿಕೊಂಡಿದ್ದಾಳೆ. ನನಗಾದ ಅನ್ಯಾಯಕ್ಕೆ ನ್ಯಾಯ ಕೊಡಿಸುವಂತೆ ಯುವತಿ ಮನವಿ ಮಾಡಿಕೊಂಡಿದ್ದಾಳೆ. ಮದುವೆಯಾಗಿ ನಾಪತ್ತೆಯಾದ ಹುಡುಗನಿಗಾಗಿ ಯುವತಿಯ ಕುಟುಂಬಸ್ಥರ ಹುಡುಕಾಟ ನಡೆಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





