Breaking News

ಮಹಿಳೆಯರಿಗೆ ಮತ್ತು ತಾಯಿಯರಿಗೆ ಪೌಷ್ಟಿಕಾಹಾರದ ಕುರಿತು ಮಾಹಿತಿ

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ
ನಂದಗಾಂವ ಗ್ರಾಮದ ಅಂಗನವಾಡಿಯಲ್ಲಿ ಕಾವಲು ಸಮಿತಿ ಸಭೆ
ಮತ್ತು ಪೌಷ್ಠಿಕ ಸಭೆ ಮಾಡಲಾಯಿತು. ಮಹಿಳೆಯರಿಗೆ ಮತ್ತು ತಾಯಿಯರಿಗೆ ಕಾವಲು ಸಮಿತಿ
ಮತ್ತು ಪೌಷ್ಟಿಕಾಹಾರದ ಕುರಿತು ಮಾಹಿತಿ ನೀಡಿದರು.
ಇತ್ತಿಚಿನ ದಿನಗಳಲ್ಲಿ ಹೆಚ್ಚಿತ್ತಿರುವ ಮಹಿಳೆಯರ ಮತ್ತು ಮಕ್ಕಳ ಕಳ್ಳ
ಸಾಗಾಣಿಕೆ ಹೆಚ್ಚು ಕಂಡು ಬರುತಿದ್ದು ಅಮಾಯಕ
ಮಹಿಳೆಯರು ಮತ್ತು ಮುಗ್ಧ ಬಾಲಕಿಯರನ್ನು ಅಕ್ರಮವಾಗಿ ಮಾರಾಟ ಹಾಗೂ ಅನೈತಿಕ ಚಟುವಟಿಕೆಗಳಿಗೆ ಬಳಕೆ
ಮಾಡಿಕೋಳ್ಳಲಾಗುತಿದೆ ಅಂತಹ ಜಾಲದ ಬಗ್ಗೆ ಎಚ್ಚರಿಕೆಯಿಂದ ಇರಬೇಕಾದ ಮಾಹಿತಿಯನ್ನು ನೀಡಲಾಯಿತು. ಇನ್ನು
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಗಳಾದ ಉದಯ ಪಾಟೀಲ
ಮಹಿಳೆಯರಿಗೆ ಮತ್ತು ಗರ್ಭಿಣಿ ತಾಯಿಯರಿಗೆ ನಿಯಮಿತವಾಗಿ ಪೌಷ್ಟಿಕ ಆಹಾರ ಸೇವೆಯ ಬಗ್ಗೆ ತಿಳಿಸಿದರು. ಗ್ರಾಮಿಣ ಪ್ರದೇಶದಲ್ಲಿ ಇರುವಂತಹ ಮಹಿಳೆಯರು
ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು
ಗರ್ಭಾವಸ್ಥೆಯ ಸಮಯದಲ್ಲಿ ಆಹಾರದ ಕಡೆಗೆ ಹೆಚ್ಚು ಒತ್ತು ನೀಡಬೇಕು ಪೌಷ್ಟಿಕ ಭರಿತವಾದ
ಆಹಾರ ಸೇವನೆಯಿಂದ ಆಗುವ ಲಾಭಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ
ನಂದಗಾವ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಿನೋದ ಪಾಯಕ,ನೀರುಪಿಸಿ ವಂದಿಸಿದರು,ಗ್ರಾಮ
ಲೇಕ್ಕಾಧಿಕಾರ ವಿಷ್ಣು ಪೂಜಾರಿ, ಅಂಗನವಾಡಿ
ಮೇಲ್ವಿಚಾರಕಿ ಆರ್ ಹೀರೆಮಠ, ಶುಶ್ರೂಷಕಿ ಸುವರ್ಣ
ಸನದಿ ಉಪಸ್ಥಿತಿ ಇದ್ದರು.

Share News

About admin

Check Also

ರಾಜ್ಯಪಾಲರ ಹೆಸರಿನಲ್ಲಿದ್ದ ಐದೂವರೆ ಎಕರೆ ಜಮೀನು ಭೂಗಳ್ಳರ ಪಾಲು.!

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಡಿಯಲ್ಲಿರುವ ಸರ್ವೇ ನಂ.221/1ಬ 19 ಎಕರೆ 30 ಗುಂಟೆ ಸಾಗುವಳಿ ಜಮೀನಿನ ಪೈಕಿ …

Leave a Reply

Your email address will not be published. Required fields are marked *