Breaking News

ಉದಯ ಬಾಳಲ್ಲಿ ಸಿಹಿ ತಂದ ಹಸಿಮೆಣಸಿನಕಾಯಿ.

ದಾವಣಗೆರೆ: ಭಾರತ ಕೃಷಿ ಪ್ರಧಾನ ದೇಶ..! ಇಲ್ಲಿ ತನ್ನದೇ ಆದ ಸಂಪ್ರದಾಯಿಕ ಕೃಷಿ ಪದ್ಧತಿಗಳು ರೂಢಿಯಲ್ಲಿವೆಯಾದರೂ ಪ್ರಯೋಗ ಶೀಲ ಕೃಷಿಕರಿಗೇನು ಕಮ್ಮಿ ಇಲ್ಲ. ಕೆಲ ರೈತರು ಆಧುನಿಕ ಕೃಷಿ ಪದ್ಧತಿಯನ್ನ ಅಳವಡಿಸಿಕೊಂಡು ಯಶಸ್ಸನ್ನು ಕಂಡಿದ್ದಾರೆ. ದಾವಣಗೆರೆ ಜಿಲ್ಲೆ ಜಗಳೂರೂ ತಾಲೂಕಿನ ಕೃಷಿಕನೋರ್ವ ಹಸಿರು ಮೆಣಸಿನ ಕಾಯಿಯನ್ನು ಬೆಳೆದು ಉತ್ತಮ ಲಾಭ ಪಡೆದಿದ್ದಾನೆ. ಎಲ್ಲರ ಬಾಯಲ್ಲಿ ಖಾರ ತರಿಸುವ ಮಣೆಸಿನಕಾಯಿ ರೈತ ಉದಯ್ ಬಾಳಲ್ಲಿ ಸಿಹಿಯನ್ನು ತಂದಿದೆ. ಬನ್ನಿ ಬಸವ ಪುರಗ್ರಾದಮ ಕೃಷಿಕನ ಯಶೋಗಾತೆಯನ್ನು ನೋಡೋಣ..ಬೇಸಿಗೆ ಬಂತಂದ್ರೆ ಸಾಕು ಕೃಷಿಕ ಕಂಗಾಲಾಗಿ ಹೋಗ್ತಾನೆ, ಕಾರಣ ನೀರು. ಬೇಸಿಗೆ ಕಾಲದಲ್ಲಿ ಬಹುತೇಕ ಕೊಳವೇ ಬಾವಿಗಳು ಬತ್ತಿಹೋಗುವುದರಿಂದ ಯಾವುದೇ ಬೆಳೆಯನ್ನು ಬೆಳೆಯಲು ಕಷ್ಟಸಾಧ್ಯ. ಆದರೆ ಇದಕ್ಕೆಲ್ಲಾ ವ್ಯತಿರಿಕ್ತ ಎಂಬಂತೆ ದಾವಣಗೆರೆ ಜಿಲ್ಲೆ ಜಗಳುರು ತಾಲೂಕು ಬಸವಪುರದ ಗ್ರಾಮದ ಉದಯ್ ಕುಮಾರ್ ಎಂಬ ರೈತ ಹಸಿರು ಮೆಣಸಿನಕಾಯಿ ಬೆಳೆದು ಯಶಸ್ಸನ್ನು ಕಂಡಿದ್ದಾನೆ. ಕೇವಲ ಒಂದು ಇಂಚು ನೀರಿಗೆ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು, ಬೇಸಿಗೆಯಲ್ಲೂ ಹಸಿರು ಮೆಣಸಿನ ಕಾಯಿ ಬೆಳೆದು ಮಾದರಿಯಾಗಿದ್ದಾನೆ.ಉದಯ್ ಕುಮಾರ್ ಮೂಲತಹ ಪ್ರಯೋಗಶೀಲ ರೈತ, ಆಧುನಿಕ ತಳಿಯದಾ ಮಗಧೀರ ಹಸಿರುಮೆಣಸಿನಕಾಯಿ ಸಸಿಗಳನ್ನು ತಂದು ತನ್ನ ಒಂದು ಹೆಕ್ಟೇರ್ ಜಮೀನಿನಲ್ಲಿ ನಾಟಿ ಮಾಡಿಸಿದ್ದು, 60ದಿನಗಳಲ್ಲಿ ಉತ್ತಮ ಇಳುವರಿಯನ್ನು ಪಡೆಯುವುದರೊಂದಿಗೆ ಹೆಚ್ಚಿನ ಆದಾಯವನ್ನು ಕೂಡ ಪಡೆದಿದ್ದಾನೆ. ಬಲಿಷ್ಠ ಕೊಂಬೆಗಳಿಂದ ಹರಡಿಕೊಂಡು ಬೆಳೆಯುವ ಈ ಮಗಧೀರ ಸಸಿಯು ಬೇಸಿಗೆ ಕಾಲಕ್ಕೆ ಹೇಳಿ ಮಾಡಿಸಿದ ತಳಿ, ಬಿರು ಬಿಸಿಲಿನಲ್ಲೂ ಉತ್ತಮವಾಗಿ ಬೆಳೆಯುವುದರೊಂದಿಗೆ ಹೆಚ್ಚಿನ ಇಳುವರಿಯನ್ನು ನೀಡುತ್ತೆ..ಸರಾಸರಿ ಹತ್ತು ಸೆಂಟಿಮೀಟರ್‍ಗಳಷ್ಟು ಉದ್ದ ಬೆಳೆಯುವ ಮಗಧೀರ ಮೆಣಸಿನಿಕಾಯಿಯು, ಹಳದಿ ಮಿಶ್ರಿತ ಹಸಿರು ಬಣ್ಣವನ್ನು ಹೊಂದಿದ್ದು, ಸ್ವಾದದಲ್ಲಿ ಖಾರದ ಗುಣವನ್ನು ಹೋದಂದಿದೆ. ಬೇಸಿಗೆಯಲ್ಲಿ ಯಾವುದೇ ಬೆಳೆಯನ್ನ ಬೆಳೆಯುವುದು ಕಷ್ಟ ಸಾಧ್ಯ, ಬಸಿಲಿನ ತಾಪಕ್ಕೆ ಗಿಡ ಸುಟ್ಟುವಹೋಗುವುದು, ರೋಗ ತಗುಲುವುದು ಹೆಚ್ಚು. ಆದರೆ ಮಗಧೀರ ತಳಿಯ ಹಸಿರು ಮೆಣಸಿನ ಗಿಡಕ್ಕೆ ರೋಗ ನಿರೋಧಕ ಶಕ್ತಿ ಜಾಸ್ತಿ. ಮಾತ್ರವಲ್ಲದೆ ಕಡಿಮೆ ತೇವದಲ್ಲಿ ಹೆಚ್ಚು ತಾಪಮಾನವಿದ್ದರೂ ಉತಕೃಷ್ಟವಾಗಿ ಬೆಳೆಯುತ್ತದೆ. ಇನ್ನು ಎರಡು ಕಟಾವಿನಿಂದ ಒಂದುವರೆ ಲಕ್ಷ ಲಾಭಾಂಶಪಡೆದುಕೊಂಡು ಸಂತಸದಲ್ಲಿರವ ರೈತ ಇನ್ನು ಹತ್ತು ಕಟಾವುಗಳ ನಿರೀಕ್ಷೆಯಲ್ಲಿದ್ದಾನೆ. ಕಡಿಮೆ ಕರ್ಚು ಕಡಿಮೆ ನೀರಿನಲ್ಲಿ ಹೆಚ್ಚು ಆದಾಯ ಘಳಿಸಿರುವ ರೈತ ಉದಯ್ ಗೆಲುವಿನ ನಗೆ ಬೀರಿದ್ದಾನೆ. ಜಗಳೂರಿನಂತಹ ಬಯಲು ಪ್ರದೇಶದ ಬಿಸಿಲಿಗೂ ಬಗ್ಗದೆ ಬೆಳೆಯುವ ಖಾರದ ಮೆಣಸಿನಕಾಯಿ ರೈತ ಉದಯ್ ಬಾಳಲ್ಲಿ ಸಿಯಿ ನೀಡಿದೆ ಎಂದರೆ ತಪ್ಪಾಗಲಾರದು.

Share News

About admin

Check Also

ರೌಡಿಶೀಟರ್ ಹ್ಯಾರಿಸ್ ಪಠಾಣ್ ಗೂಂಡಾ ಕಾಯ್ದೆ ಅಡಿ ಬಂಧನ…

ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ: ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ವ್ಯವಹಾರ ಅಪಹರಣ ಕೊಲೆ ಪ್ರಕರಣಗಳು.. ಒಟ್ಟು 11 ಪ್ರಕರಣಗಳು ವಿವಿಧ …

Leave a Reply

Your email address will not be published. Required fields are marked *