ಬಳ್ಳಾರಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿ ರೈತರು ಹಾಗೂ ರೈತಪರ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಕೆರೆಗಳಿಗೆ ನದಿ ನೀರು ಪೂರೈಸಬೇಕು. ನೆರೆಹಾವಳಿಗೆ ತುತ್ತಾದ ರೈತರಿಗೆ ಶೀಘ೯ವೇ ಸಮಪ೯ವಾದ ಪರಿಹಾರಗಳನ್ನು ನೀಡಬೇಕು ಹಾಗೂ ಹಲವಾರು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ನೂರಾರು ರೈತರು ರೈತಸಂಘ ಹಾಗು ಹಸಿರು ಸೇನೆ ಕಾಯ೯ಕತ೯ರು ಪ್ರತಿಭಟನೆ ನಡೆಸಿದರು.
ಈ ವೇಳೆ ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ ಸಂದಭ೯ದಲ್ಲಿ ನೆರೆಹಾವಳಿ ಪ್ರದೇಶಗಳಿಗೆ ಭೇಟಿ ಕೊಡುವ ಸಂದಭ೯ದಲ್ಲಿ ಫ್ರತಿಭಟನಾನಿರತ ರೈತರನ್ನು ಭೇಟಿಯಾಗಿ ಅವರ ಅಹವಾಲು ಸ್ವೀಕರಿಸಿ ಮಾತನಾಡಿದರು.ಸಕಾ೯ರ ರೈತರ ಪರ ಕೆಲಸಮಾಡುತ್ತಿದ್ದು.ಕೇಂದ್ರ ಹಾಗೂ ರಾಜ್ಯ ಸಕಾ೯ರಗಳೆರಡೂ ನೆರೆಹಾವಳಿಯ ನಿವ೯ಹಣೆಯನ್ನು ಸಮರೋಪಾದಿಯಲ್ಲಿ ನಿವ೯ಹಿಸುತ್ತಿದ್ದು.ಜಿಲ್ಲೆಯ ಎಲ್ಲಾ ಕೆರೆಗಳಿಗೆ ನದಿನೀರು ಪೂರೈಸುವ ಬೃಹತ್ ಯೋಜನೆ ಜಾರಿಗೆ ತರುವಂತೆ ತಾವು ಕೇಂದ್ರ ಸಕಾ೯ರಕ್ಕೆ ಸಂಸತ್ ನಲ್ಲಿ ಮನವಿ ಮಾಡಲಾಗಿದೆ. ಈಗಾಗಲೇ ಯಡಿಯೂರಪ್ಪನವರು ಅದರ ಕುರಿತು ಪರಿಶೀಲಿಸಿ ಸಕಾರಾತ್ಮಕವಾಗಿ ಸಹಕರಿಸುವುದಾಗಿ ಭರವಸೆ ನೀಡಿದ್ದಾರೆ ಉಳಿದ ಕೆಲಬೇಡಿಕೆಗಳ ಕುರಿತು ಸಂಬಂಧಿಸಿದ ಇಲಾಖಾಧಿಕಾರಿಗಳ ಜೊತೆ ಚಚಿ೯ಸಿ ಸಮಸ್ಯಗಳಿಗೆ ಪರಿಹಾರ ಕಂಡುಕೊಳ್ಳೋಣ ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ತಾವು ಮಾಡುವುದಾಗಿ ಸಂಸದ ವೈ.ದೇವೇಂದ್ರಪ್ಪ ಪ್ರತಿಭಟನಾ ನಿರತ ರೈತರಿಗೆ ಭರವಸೆ ನೀಡಿದರು. ವರದಿ: ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428*
bigtvnews | Hubli Dharwad News | Kannada News | Karnataka News Hubli News | News In Hubli | Local news





