ಮಂಡ್ಯ : ಒಣಗುತ್ತಿರುವ ಕಬ್ಬಿನ ಬೆಳೆಯನ್ನು ಉಳಿಸಿಕೊಳ್ಳಲು ಕೂಡಲೇ ರಾಜ್ಯ ಸರ್ಕಾರ ಕೃಷ್ಣರಾಜಸಾಗರ ಅಣೆಕಟ್ಟೆಯಿಂದ ನೀರು ಹರಿಸಿ ಜಿಲ್ಲೆಯ ರೈತರ ಹಿತ ಕಾಪಾಡಬೇಕು ಎಂದು ರಾಜ್ಯ ರೈತಸಂಘದ ಉಪಾಧ್ಯಕ್ಷ ಕೆ.ಆರ್.ಜಯರಾಂ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿಂದು ಈ ಕುರಿತು ಮಾತನಾಡಿದ ರೈತ ಮುಖಂಡರು ಮಂಡ್ಯದ ಜನರು ಎಡಬಿಡದ ರೈತರು ಹೋರಾಟ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ
ಪ್ರತಿಷ್ಠೆಯನ್ನು ಬದಿಗಿಟ್ಟು ವಿಶ್ವೇಶ್ವರಯ್ಯ ನಾಲೆಗೆ ನೀರು ಹರಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಲಾಯಿತು.
ಕುಡಿಯುವ ನೀರಿನ ಹೆಸರಿನಲ್ಲಿ ಮೈಸೂರು ಬೆಂಗಳೂರು ಮಹಾನಗರದ ಜನರಿಗೆ ನೀರು ಹರಿಸುತ್ತುರುವ ರಾಜ್ಯ ಸರ್ಕಾರವು ರೈತರ ಹಿತವನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಕುಡಿಯುವ ನೀರನ್ನು ಕೈಗಾರಿಕೆಗಳಿಗೆ ನೀಡುತ್ತಿರುವ ಸರ್ಕಾರ ಜನರಿಗೆ ತಿನ್ನಲು ಅನ್ನವನ್ನು ತನ್ನ ಶ್ರಮದ ದುಡಿಮೆಯ ಮೂಲಕ ನೀಡುತ್ತಿರುವ ರೈತನ ವರ್ಷದ ದುಡಿಮೆಯನ್ನು ನಾಶಪಡಿಸುತ್ತಿದೆ. ರೈತರು ಕಳೆದ ಒಂದು ವಾರದಿಂದ ಶಾಂತಿಯುತವಾಗಿ ನಡೆಸುತ್ತಿರುವ ಹೋರಾಟವನ್ನು ಉಗ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದ ಜಯರಾಂ ಜಿಲ್ಲಾ ಉಸ್ತುವಾರಿ ಮಂತ್ರಿಗೆ ರೈತರ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲ. ಪ್ರತಿಭಟನಾನಿರತ ರೈತ ಮುಖಂಡರನ್ನು ಬಂದು ಮಾತನಾಡಿಸುವ ಸೌಜನ್ಯವನ್ನು ತೋರ್ಪಡಿಸದೇ ಕಾವೇರಿ ರೈತ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಜಿ.ಮಾದೇಗೌಡ ಅವರನ್ನು ಮಾತನಾಡಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮಗನನ್ನು ಜಿಲ್ಲೆಯ ರೈತರು ಸೋಲಿಸಿದರು ಎಂಬ ಸೇಡಿನ ಮನೋಭಾವನೆ ಯಿಂದ ರೈತರ ಒಣಗುತ್ತಿರುವ ಬೆಳೆಗಳನ್ನು ಉಳಿಸಲು ನೀರು ಹರಿಸದೇ ದ್ವೇಶದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರೈತ ಪರಿಷತ್ ಸಭೆಗೆ ಅಮೇರಿಕಾ ದೇಶಕ್ಕೆ ಹೋಗಿರುವ ಮುಖ್ಯ ಮಂತ್ರಿಗಳು ಮಂಡ್ಯ ಜಿಲ್ಲೆಯ ರೈತರ ಒಣಗುತ್ತಿರುವ ಬೆಳೆಗಳನ್ನು ಉಳಿಸಲು ನೀರು ಹರಿಸಲು ಆದೇಶ ನೀಡಿ ದೊಡ್ಡತನ ಪ್ರದರ್ಶನ ಮಾಡಬೇಕು. ಇಲ್ಲದಿದ್ದರೆ ಒಂದೆರಡು ದಿನಗಳಲ್ಲಿ ಕಾನೂನು ಭಂಗ ಚಳುವಳಿ ನಡೆಸಿ ಬೆಂಗಳೂರಿನ ಕುಡಿಯುವ ನೀರಿನ ಸರಬರಾಜು ತಡೆಯುವುದು ಸೇರಿದಂತೆ ರಸ್ತೆತಡೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ರೈತ ಸಂಘದ ಮಾಜಿ ಅಧ್ಯಕ್ಷ ಮುದುಗೆರೆ ರಾಜೇಗೌಡ, ತಾಲೂಕು ರೈತ ಸಂಘದ ಅಧ್ಯಕ್ಷ ಮರುವನಹಳ್ಳಿ ಶಂಕರ್, ರೈತ ಮುಖಂಡರಾದ ಮುದ್ದುಕುಮಾರ್, ಕರೋಠಿ ತಮ್ಮಯ್ಯ, ನಗರೂರು ಕುಮಾರ್ ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





