Breaking News

ಸಿಎಂ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯಗೆ ರಾಜಕೀಯ ಸಾಮಾನ್ಯ ಜ್ಞಾನ ಇಲ್ಲ: ಶೆಟ್ಟರ್ ಆರೋಪ

ಹುಬ್ಬಳ್ಳಿ; ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜಕೀಯ ಸಾಮಾನ್ಯ ಜ್ಞಾನ ಇಲ್ಲ.ದೇಶದ ಅಭಿವೃದ್ಧಿ, ಸುರಕ್ಷತೆಗಾಗಿ ಜನ ನರೇಂದ್ರ ಮೋದಿ ಅವರುಗೆ ಓಟ್ ಹಾಕಿದ್ದಾರೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ತಿಳಿಸಿದರು.ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ‌ ರಾಹುಲ್ ಗಾಂಧಿಯನ್ನು ಜನ ತಿರಸ್ಕಾರ ಮಾಡಿ ಲೋಕಸಭಾ ಚುನಾವಣೆ ಫಲಿತಾಂಶ ನೀಡಿದ್ದಾರೆ ಎಂದರು. ದೋಸ್ತಿಗಳು ವ್ಯಂಗ್ಯವಾಗಿ ಮಾತನಾಡಿ ಜನರ ತೀರ್ಪನ್ನು ಧಿಕ್ಕರಿಸಿದ್ದಾರೆ ಎಂದು ಲೇವಡಿ ಮಾಡಿದರು.ಸಾಮಾನ್ಯ ಜ್ಞಾನ ಇಲ್ಲದ ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿ. ಜನರ ತೀರ್ಪಿನ ಬಗ್ಗೆ ಹುಚ್ಚು ಹುಚ್ಚರ ಹಾಗೆ ಮಾತನಾಡೋದು ಪ್ರಜಾತಂತ್ರ ವ್ಯವಸ್ಥೆಗೆ ಮಾಡುವ ಅಪಮಾನವಾಗಿದೆ.ಹಾಗಾಗಿ ಕರ್ನಾಟಕದ ಜನತೆಯ ಕ್ಷಮೆ ಕೇಳಬೇಕು ಎಂದರು. ಇಲ್ಲವಾದರೇ ರಾಜಕೀಯ ನಿವೃತ್ತಿ ಹೊಂದಬೇಕು. ಮೈತ್ರಿ ಸರ್ಕಾರದ ಜಗಳ ತಾರಕಕ್ಕೆ ಏರಿದೆ. ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಯಾಕೇ ಸೋತರು. ಅಲ್ಲಿನ ಜನರು ದಡ್ಡರಾ ಎಂದು ಪ್ರಶ್ನಿಸಿದರು. ನಾವು ಮಧ್ಯಂತರ ಚುನಾವಣೆಗೆ ಹೋಗುವುದಿಲ್ಲ.‌ ಹಾಗೆನಾದರೂ ಆದರೆ ನಾವೇ ಸರ್ಕಾರ ರಚನೆ ಮಾಡುತ್ತೇವೆ. ಯಾರು ಸೊತ್ತಿರುತ್ತಾರೆ ಅವರು ಚುನಾವಣೆಯ ನಿರೀಕ್ಷೆಯಲ್ಲಿ ಇರ್ತಾರೆ ಎಂದು ಹೇಳಿದರು.

Share News

About admin

Check Also

ನಗರ ಪೊಲೀಸ್ ವಿರುದ್ಧ ಅರ್ಭಟಿಸಿದ ರೌಡಿಶೀಟರ್ ಗಳ ವಿರುದ್ಧ ಕ್ರಮ ಒತ್ತಾಯ!!

ಮನೆಮುರಕರ ಕೂಟದಿಂದ ಸಿಪಿಐ ಹಾಗು ಪೊಲೀಸ್ ಇಲಾಖೆಗೆ ಕಳಂಕ ತರಲು ನಡಿತಾ ಸಂಚು? ಕೋರ್ಟ್ ನಲ್ಲಿ ಕೇಸ್ ಇದ್ದರು ಮಾಧ್ಯಮಗಳ …

Leave a Reply

Your email address will not be published. Required fields are marked *