Breaking News

ಪ್ರಮೋದ್ ಶೆಟ್ಟಿ ನಾಯಕರಾಗಿ ನಟಿಸಿರುವ ‘ಲಾಫಿಂಗ್ ಬುದ್ಧ’ ಚಿತ್ರ‌‌ ಈ ವಾರ ಬಿಡುಗಡೆ

ಬೆಂಗಳೂರು: ರಿಷಭ್ ಶೆಟ್ಟಿ ಫಿಲಂಸ್ ಲಾಂಛನದಲ್ಲಿ ರಿಷಭ್ ಶೆಟ್ಟಿ ನಿರ್ಮಾಣ ಮಾಡಿರುವ, ಎಂ ಭರತ್ ರಾಜ್ ನಿರ್ದೇಶನದಲ್ಲಿ ಪ್ರಮೋದ್ ಶೆಟ್ಟಿ ನಾಯಕರಾಗಿ ನಟಿಸಿರುವ ‘ಲಾಫಿಂಗ್ ಬುದ್ಧ’ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ.

ಪೊಲೀಸ್ ಅವರ ಕುಟುಂಬ ಹಾಗೂ ಭಾವನೆಗಳ ಕುರಿತಾದ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕ ಭರತ್ ರಾಜ್ ಅವರೆ ಕಥೆ, ಚಿತ್ರಕಥೆ ರಚಿಸಿದ್ದು, ಅನಿರುದ್ ಮಹೇಶ್, ಭರತ್ ರಾಜ್ ಹಾಗೂ ರಘು ನಿಡವಳ್ಳಿ ಸಂಭಾಷಣೆ ಬರೆದಿದ್ದಾರೆ.

ಪ್ರಮೋದ್ ಶೆಟ್ಟಿ ಗೋವರ್ಧನ ಎಂಬ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತೇಜು ಬೆಳವಾಡಿ ನಾಯಕಿಯಾಗಿ ನಟಿಸಿದ್ದಾರೆ. ದಿಗಂತ್ ಮಂಚಾಲೆ ಅವರು ವಿಭಿನ್ನಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಬರುವಿಕೆಯಿಂದ ಕಥೆಗೆ ಒಂದು ತಿರುವು ಸಿಗುತ್ತದೆ. ಹಿರಿಯ ನಟ ಸುಂದರರಾಜ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

Share News

About BigTv News

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *