ಕೋಲಾರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ದನದ ಕೊಟ್ಟಿಗೆಗೆ ಬೆಂಕಿ ಹೊತ್ತಿರುವ ಘಟನೆ ಕೋಲಾರದ ಬಂಗಾರಪೇಟೆ ತಾಲ್ಲೂಕಿನ ಕಾರಹಳ್ಳಿ ತೋಟದ ಮನೆಗಳ ಬಳಿ ನಡೆದಿದೆ.ಶ್ರೀನಿವಾಸ್ ಗೆ ಸೇರಿದ ದನದಕೊಟ್ಟಿಗೆಯಲ್ಲಿದ್ದ ಒಂದು ಹಸು ಜೀವಂತ ಸಮಾಧಿಯಾಗಿದ್ದು, ಟ್ರ್ಯಾಕ್ಟರ್ ಹಾಗೂ ಕೃಷಿ ಬಳಕೆ ಉಪಕರಣಗಳು ಭಸ್ಮಗೊಂಡಿವೆ. ಬೆಸ್ಕಾಂತಾಲ್ಲೂಕಿನಾದ್ಯಂತ ವಿದ್ಯುತ್ ವ್ಯತ್ಯಯದ ಪ್ರಕಟಣೆ ಹೊರಡಿಸಿದ್ದರೂ ವಿದ್ಯುತ್ ಅವಘಡ ಹೇಗೆ ಸಂಭವಿಸಿತು ಎಂದು ಸ್ಥಳೀಯರು ಘಟನೆಗೆ ಕಾರಣ ಹುಡುಕಾಡುತ್ತಿದ್ದಾರೆ.ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ, ಬೆಂಕಿ ನಂದಿಸಿದರು.ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





