Breaking News

ಅಧಿವೇಶನ ಆರಂಭಕ್ಕೂ ಮೊದಲು ದೋಸ್ತಿ ಸರ್ಕಾರ ಪತನ : ರೇಣುಕಾಚಾರ್ಯ ಭವಿಷ್ಯ.

ದಾವಣಗೆರೆ: ಈ ಬಾರಿಯ ಅಧಿವೇಶನ ಪ್ರಾರಂಭವಾಗುವದರೊಳಗೆ ಸಮ್ಮಿಶ್ರ ಸರಕಾರ ಪತವಾಗುವದು ನಿಶ್ಚಿತ ಎಂದು ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಭವಿಷ್ಯ ನುಡಿದರು.
ದಾವಣಗೆರೆಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಸಮ್ಮಿಶ್ರ ಸರ್ಕಾರದ ವೈಫಲ್ಯದ ವಿರುದ್ಧ ಶಾಸಕರು ಭುಗಿಲೆದ್ದಿದ್ದಾರೆ. ಹೀಗಾಗಿ ಜೆಡಿಎಸ್-ಕಾಂಗ್ರೆಸ್ ಶಾಸಕರೇ ಸಮ್ಮಿಶ್ರ ಸರ್ಕಾರ ಪತನ ಆಗತ್ತೆ ಎಂದು ಹೇಳುತ್ತಿದ್ದಾರೆ.
ಅಧಿವೇಶನದೊಳಗೆ ಸರ್ಕಾರದ ಪತನ ಆಗೋದು ನಿಶ್ಚಿತ ಎಂದರು.
ಆನಂದ್ ಸಿಂಗ್ ರಾಜೀನಾಮೆ ಕುರಿತು ಪ್ರತಿಕ್ರಿಯೆ ನೀಡಿ, ಸರ್ಕಾರದ ದುರಾಡಳಿತಕ್ಕೆ ಬೇಸತ್ತು ಆನಂದ್ ಸಿಂಗ್ ರಾಜೀನಾಮೆ ಕೊಟ್ಟಿದ್ದಾರೆ.
ಜಿಂದಾಲ್ ಗೆ ಭೂಮಿ ಹಸ್ತಾಂತರ ವಿರೋಧಿಸಿ ಆನಂದ್‌ ಸಿಂಗ್ ಸೇರಿದಂತೆ ಅನೇಕರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಕಾಂಗ್ರೆಸ್ ಶಾಸಕರೇ
ಜಿಂದಾಲ್ ಗೆ ಭೂಮಿ ಹಸ್ತಾಂತರಕ್ಕೆ ವಿರೋಧ ಮಾಡಿದ್ದರು. ಅಲ್ಲದೇ ಜನಾಭಿಪ್ರಾಯ ಸಂಗ್ರಹಕ್ಕೆ ಕ್ಯಾಬಿನೆಟ್ ಸಬ್ ಕಮಿಟಿಗೂ ಮನವಿ ಮಾಡಿದ್ದರು. ಆದರೆ ಸರ್ಕಾರ ಇದ್ಯಾವದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ.
ಒಂದೂವರೆ ಲಕ್ಷಕ್ಕೆ 30*40 ನಿವೇಶನ ಸಿಗೋದಿಲ್ಲ. ಇಂತಹ ಸಂದರ್ಭದಲ್ಲಿ ಒಂದು ಎಕರೆ ಜಮೀಮಿಗೆ ಕೇವಲ ೧ ಲಕ್ಷ ರೂಪಾಯಿ ಕೊಡುತ್ತಿದ್ದಾರೆ. ಈ ಕುರಿತು ಆನಂದ ಸಿಂಗ್ ರಾಜೀನಾಮೆ ಕೊಡೋದಕ್ಕಿಂತ ಮುಂಚೆ ನನ್ನ ಬಳಿಯೂ ಚರ್ಚಿಸಿದ್ದರು ಎಂದು ತಿಳಿಸಿದರು. ‌
ಉಮೇಶ್ ಜಾಧವ್, ಆನಂದ್ ಸಿಂಗ್, ರಮೇಶ್ ಜಾರಕೀಹೊಳಿ ಅವರನ್ನು ಅಭಿನಂದಿಸುತ್ತೇನೆ – ಅವರ ನಿರ್ಧಾರ ಅಭಿನಂದನಾರ್ಹ.
ದಿನೇಶ್ ಗುಂಡೂರಾವ್ ಹೇಳ್ತಾರೆ ರಿವರ್ಸ್ ಆಪರೇಷನ್ ಮಾಡ್ತಿವಿ ಅಂತ ಹೇಳ್ತಿದ್ದಾರೆ.
ದಿನೇಶ್ ಗುಂಡೂರಾವ್ ಗೆ ಮೆದುಳು ಇಲ್ಲ, ತಾಕತ್ ಇದ್ದರೆ ಒಬ್ಬ ಬಿಜೆಪಿ ಶಾಸಕರನ್ನು ಆಪರೇಷನ್ ಮಾಡ್ಲಿ ನೋಡೋಣ ಎಂದು ಗುಂಡೂರಾವ್ ಗೆ ಸವಾಲು ಹಾಕಿದರು.
ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ದೇವೇಗೌಡರ ಕುಟುಂಬಕ್ಕೆ ಬುದ್ದಿ ಭ್ರಮಣೆ ಆಗಿದೆ ಎಂದು ವ್ಯಂಗ್ಯವಾಡಿದರು.

Share News

About admin

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *