Breaking News

ಟ್ರಾನ್ಸ್ ಫಾರ್ಮರ್ ಬಿದ್ದು ಎತ್ತುಗಳಿಗೆ ಗಾಯ ರೈತ ಬಚಾವ್

ದಾವಣಗೆರೆ; ಜಮೀನಿನಲ್ಲಿದ್ದ ಟ್ರಾನ್ಸ್ ಫಾರ್ಮರ್ ವಿದ್ಯುತ್ ಕಂಬ ಬಿದ್ದು ಎತ್ತುಗಳು ತೀವ್ರ ಗಾಯಗೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿಕ್ಕಗಂಗೂರು ಗ್ರಾಮದಲ್ಲಿ ನಡೆದಿದೆ.ಇಂದು ಬೆಳಿಗ್ಗೆ‌ ರೈತ ಈಶಪ್ಪ ಎತ್ತಿನಗಾಡಿ‌ ಸಮೇತ ಬೇಸಾಯಕ್ಕೆ ಹೊರಟ್ಟಿದ್ದ ಇದೇ ಸಮಯದಲ್ಲೆ ಟಿಸಿ ಇದ್ದ ಕಂಬ ಕುಸಿದು‌ ಬಿದ್ದಿದೆ. ಪರಿಣಾಮ ಎತ್ತುಗಳು ಗಾಯಗೊಂಡಿದ್ದು, ಅದೃಷ್ಟವಶಾತ್ ರೈತ ಹಾಗೂ ಎತ್ತುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರೆಲ್ಲ ಸೇರಿ ಕಂಬದ ಕೆಳಗೆ ಸಿಲುಕಿದ್ದ ಎತ್ತುಗಳನ್ನು ಹೊರಕ್ಕೆ ತೆಗೆದಿದ್ದು, ಬೆಸ್ಕಾಂ‌ ಇಲಾಖೆ ವಿರುದ್ದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share News

About admin

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *