Breaking News

ಕಾಂಗ್ರೆಸ್ ಶಾಸಕರ ರಾಜಿನಾಮೆಗೆ ಸಿದ್ದು ಕಾರಣ.

ಉಡುಪಿ : ಕಾಂಗ್ರೆಸ್ಸಿನ ೧೨ ಶಾಸಕರು ರಾಜೀನಾಮೆ ನೀಡಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಕಾರಣ ಎಂದು ಉಡುಪಿ ಚಿಕ್ಕಮಂಗಳೂರು ಸಂಸದೆ ಶೋಭಾ ಕರಾಂದ್ಲಾಜೆ ಹೇಳಿದ್ದಾರೆ.
ಅವರು ಉಡುಪಿಯ ಸಂಸದರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಿದ್ದರಾಮಯ್ಯನವರ ವಿರುದ್ದ ವಾಗ್ದಾಳಿ ನಡೆಸಿದರು.
ಮೈತ್ರಿ ಸರ್ಕಾರದ ಆಂತರಿಕ ಗೊಂದಲ ಬಹಿರಂಗವಾಗಿದೆ ,ಆನಂದ್ ಸಿಂಗ್ ರಾಜಿನಾಮೆ ಕೊಟ್ಟಾಗಲೇ ಕಾಂಗ್ರೆಸ್ ಎಚ್ಚೆತ್ತುಕೊಳ್ಳಬೇಕಿತ್ತು ಎಂದು ಹೇಳಿದರು.
ಸಿದ್ದು- ಪರಂ ಒಳಜಗಳವೇ ಬಿರುಕಿಗೆ ಕಾರಣ
ಸಿದ್ದರಾಮಯ್ಯ – ಪರಮೇಶ್ವರ್ ಒಳ ಜಗಳವೇ ಕಾಂಗ್ರೆಸ್ ಬಿರುಕಿಗೆ ಕಾರಣ ವಾಗಿದೆ.
ಸಿದ್ದರಾಮಯ್ಯ ದೋಸ್ತಿ ಸರ್ಕಾರದ ವಿರುದ್ದ ಶಾಸಕರನ್ನ ಎತ್ತಿಕಟ್ಟಿದ್ದಲ್ಲದೇ ಅಂತರಿಕ
ಜಗಳ ಹೆಚ್ಚು ಮಾಡಿದ್ದಾರೆ.
ನಿಮ್ಮ ಒಳಜಗಳದಿಂದ ಶಾಸಕರು ರಾಜೀನಾಮೆ ನೀಡ್ತಾ ಇದ್ದಾರೆ.ಇದಕ್ಕೆ
ಮೋದಿ ,ಯಡಿಯೂರಪ್ಪ ಅವರ ಕಡೆ ಕೈ ತೋರಿಸಬೇಡಿ ಎಂದರು. ‌
ಬಿಜೆಪಿಗೆ ಆಹ್ವಾನ
ಬೇರೆ ಪಕ್ಷದ ಸದಸ್ಯರಲ್ಲದವರು ಬಿಜೆಪಿಗೆ ಬರಬಹುದು , ರಾಜಿನಾಮೆ ಸ್ವೀಕಾರ ಆದಮೇಲೆ ಯಾರೂ ಬಿಜೆಪಿಗೆ ಸೇರಬಹುದು ಎಂದು ಎಂದು ಬಹಿರಂಗವಾಗಿ ಅತೃಪ್ತ ಶಾಸಕರಿಗೆ ಅಹ್ವಾನ ನೀಡಿದ್ದಾರೆ.
ಅಲ್ಲದೆ ಮೋದಿಯ ಅನುಷ್ಟಾನಕ್ಕೆ ತರುವ ಸರ್ಕಾರ ರಾಜ್ಯದಲ್ಲಿ ಬರಬೇಕು ಎಂದರು .
ಬರಗಾಲ ಇರುವಾಗಲೇ ಸಿಎಂ ಅಮೇರಿಕಾ ಪ್ರವಾಸದಲ್ಲಿದ್ದಾರೆ
ಸಿ ಎಂ ಕುಮಾರಸ್ವಾಮಿ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ ಶೋಭಾ ಕರಾಂದ್ಲಾಜೆ ,ಉಡುಪಿಯಲ್ಲಿ ಸಿಎಂ ಮಸಾಜ್ ಮಾಡಿಸಿದರು ,ಗ್ರಾಮ ವಾಸ್ತವ್ಯದ ನಾಟಕವಾಡಿ ,ಅಮೇರಿಕಾಕ್ಕೆ ಹೋದರು.
ಸಿಎಂ ವಾಪಸ್ಸಾಗುವಾಗ ಕಾಂಗ್ರೆಸ್ ಯಾವ ನಾಟಕ ಆಡುತ್ತೋ ಅಂತ ನೋಡಬೇಕು .ಎಂದು ವ್ಯಂಗ್ಯವಾಡಿದರು.
ರಾಜ್ಯದ ಬೆಳವಣಿಯನ್ನು ರಾಜ್ಯಪಾಲರು ಗಮನಿಸಬೇಕು , 15 ಜನ ರಾಜಿನಾಮೆ ನೀಡಿದರೆ ಸರಕಾರಕ್ಕೆ ಬಹುಮತ ಇಲ್ಲ .ರಾಜಿನಾಮೆ ಕೊಟ್ಟ ಶಾಸಕರು ಬಿಜೆಪಿಯ ಜೊತೆ ಸಂಪರ್ಕದಲ್ಲಿಲ್ಲ ,
ಬಿಜೆಪಿ ಸಿದ್ದಾಂತ
ಮೋದಿಯವರು ಒಪ್ಪಿದರೆ ಯಾರು ಕೂಡ ನಮ್ಮ ಪಕ್ಷಕ್ಕೆ ಬರಬಹುದು .
ಜಿ.ಟಿ ದೇವೇಗೌಡ ಹಿಂದೆ ನಮ್ಮ ಜೊತೆ ಇದ್ದರು ,ಅಲ್ಲಿ ಬೆಸರವಾದರೆ ಯಾವತ್ತೂ ಜಿಟಿಡಿ ಬಿಜೆಪಿಗೆ ಬರಬಹುದು.
ಡಿಕೆಶಿ ಎಂಟ್ರಿ ಲೇಟಾಯ್ತು
ಗೊಂದಲ ನಿವಾರಣೆ ಮಾಡಲು ಡಿಕೆಶಿಯವರು ಬಂದಿದ್ದು ಬಹಳ ತಡವಾಯ್ತು , ಜಿಂದಾಲ್ ಪರಾಬಾರೆಗೆ ಡಿಕೆಶಿಯೇ ಕಾರಣ .
ಸ್ಪೀಕರ್ ಕಚೇರಿಗೆ ಈಗ ಹೋಗಿ ಸಮಧಾನ ಮಾಡಿದರೆ ಪ್ರಯೋಜನ ಇಲ್ಲ .
ಎಂದು ಹೇಳಿಕೆ ನೀಡಿದರು.

Share News

About admin

Check Also

ಸಚಿವರಿಗೆ ಖಾತೆ ಹಂಚಿದ ಸಿಎಂ ಡಿಕೆಶಿ..! ಯಾರಿಗೆ ಯಾವ ಖಾತೆ ಸಿಕ್ಕಿತು..?

ಡಿಕೆಶಿ ಸರ್ಕಾರದಲ್ಲಿ ಖಾತೆ ಫಿಕ್ಸ್..! ಕೆಲವರಿಗೆ ಹಳೆ ಖಾತೆ, ಕೆಲವರಿಗೆ ಹೊಸ ಜವಾಬ್ದಾರಿ..! ಬೆಂಗಳೂರು: ಸಚಿವರಿಗೆ ಖಾತೆ ಹಂಚಿದ ಸಿಎಂ …

Leave a Reply

Your email address will not be published. Required fields are marked *