Breaking News

ಜು.11ರಂದು ಐಬಿಎಂಆರ್ ನಲ್ಲಿ ಉದ್ಯೋಗ ಮೇಳ

ಹುಬ್ಬಳ್ಳಿ: ಐಬಿಎಂಆರ್ ಕಾಲೇಜು ಹಾಗೂ ಆಕ್ಸ್‌ಫರ್ಡ್ ಪಾಲಿಟೆಕ್ನಿಕ್ ಸಹಯೋಗದಲ್ಲಿ ಜು.11 ರಂದು ಪ್ರಗತಿ -2019 ಉದ್ಯೋಗ ಮೇಳವನ್ನು ವಿದ್ಯಾನಗರದ ಐಬಿಎಂಆರ್ ಕಾಲೇಜ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಐಬಿಎಂಆರ್ ನಿರ್ದೇಶಕ ರೀಯಾಜ ಬಸರಿ ತಿಳಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು ವರ್ಷಗಳಿಂದ ಬಿಸಿನೆಸ್ ಎಜುಕೇಶನ್ ಲ್ಲಿ ಗಣನೀಯ ಸೇವೆ ಸಲ್ಲಿಸುತ್ತಾ ಬಂದಿರುವ ಐಬಿಎಂಆರ್ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳಿಗೆ ಸೂಕ್ತ ಪ್ಲೇಸ್ ಮೆಂಟ್ ಮಾಡುವಂತ ಕಾರ್ಯವನ್ನು ಸುಮಾರು ಒಂಬತ್ತು ವರ್ಷಗಳಿಂದ ನಡೆಸುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಉದ್ಯೋಗ ಮೇಳದಲ್ಲಿ ಇನ್ಫೋಸಿಸ್, ವೈಟ್ ಹಾರ್ಸ್, ಐಬಿಎಂ, ಮುತೂಟ್ ಪೈನಾನ್ಸ್, ದಿಯಾ ಸಿಸ್ಟಮ್, ಎನ್.ಎಸ್.ಇನ್ಪೋಟೆಕ್, ವಿಸೆನ್ ನೆಟ್, ಅಖಿಲ ಸೌಕ್ಯ ಸೇರಿದಂತೆ ಹಲವಾರು ಕಂಪನಿಗಳು ಸೇರಿದಂತೆ ಐವತ್ತು ಕಂಪನಿಗಳು ಭಾಗವಹಿಸುತ್ತವೆ, ಎರಡರಿಂದ ಮೂರು ಸಾವಿರ ಉದ್ಯೋಗಗಳನ್ನು ಈ ಮೇಳದಲ್ಲಿ ನೀಡಲಾಗುವುದು ಆಸಕ್ತ ಎಸ್ ಎಸ್ ಎಲ್ ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿಧರರು ಈ ಮೇಳದಲ್ಲಿ ಭಾಗವಹಿಸಬಹುದು. ಬರುವಾಗ ಬಯೋ ಡೇಟಾ, ಪೋಟೊ, ಆಧಾರ ಕಾರ್ಡುಗಳನ್ನು ಕಡ್ಡಾಯವಾಗಿ ತೆಗೆದುಕೊಂಡು ಬರಬೇಕು ಎಂದರು.
ಉದ್ಯೋಗ ಮೇಳದಲ್ಲಿ ಆನ್ ಲೈನ್ ನೋಂದಣಿ ಹಾಗೂ ಸ್ಮಾರ್ಟ್ ನೋಂದಣಿ ವ್ಯವಸ್ಥೆ ಕಲ್ಪಿಸಲಾಗಿದೆ. ಆಸಕ್ತರು 9015777101 ದೂರವಾಣಿ ಸಂಖ್ಯೆಗೆ ಮಿಸ್ ಕಾಲ್ ಮಾಡುವ ಮೂಲಕ ನೋಂದಣಿ ಮಾಡಿಕೊಳ್ಳಬಹುದು ಅಲ್ಲದೇ ಮೇಳದಲ್ಲಿ ಕೂಡ ನೋಂದಣಿ ವಿಭಾಗಗಳನ್ನು ತೆರೆಯಲಾಗುತ್ತದೆ ಅಲ್ಲಿಯೂ ಕೂಡ ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಆಸಕ್ತರು ಭಾಗವಹಿಸುವ ಮೂಲಕ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗಿರೀಶ ಅಂಗಡಿ,‌ಆಕಾಶ ಪಾಠಕ್, ವಿಕ್ರಮ ಕುಲಕರ್ಣಿ ಸೇರಿದಂತೆ ಇತರರು ಇದ್ದರು.

Share News

About admin

Check Also

ಇಟ್ಟಂಗಿ ತುಂಬಿದ ಟೆಂಪೋ, ಬೈಕ್ ಡಿಕ್ಕಿ ಸವಾರ ಸಾವು.!!

ಇಟ್ಟಿಗೆ ತುಂಬಿದ ಟೆಂಪೋ ಬೈಕ್ ಮಧ್ಯೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಮನಸೂರ ಕ್ರಾಸ್ ಬಳಿ …

Leave a Reply

Your email address will not be published. Required fields are marked *