Exclusive ವರದಿ-1ಹುಬ್ಬಳ್ಳಿ:-ವೀಕ್ ಎಂಡ್ ಬಂದ್ರೇ ಹುಬ್ಬಳ್ಳಿಯ ಸರ್ಕಾರಿ ಬಂಗಲೆಯಲ್ಲೇ ರಾಜಾರೋಷವಾಗಿ ಇಸ್ಪೀಟ್ ಆಡ್ತಾರೆ. ಅಸಲಿಗೆ ಇದು ಇಸ್ಪೀಟ್ ಕ್ಲಬ್ ಆಗ್ಬಿಟ್ಟಿದೆ. ಆಡೋರ್ ಯಾರ್ ಗೊತ್ತಾ.. ನಿವೃತ್ತ ಸರ್ಕಾರಿ ಅಧಿಕಾರಿಗಳೇ.. ಇದು ಸುಳ್ಳೇನಲ್ಲ. ಲೋಕೋಪಯೋಗಿ ಇಲಾಖೆಯ ನಿವೃತ್ತ ಅಧಿಕಾರಿಗಳಿಗೆ ಇಲ್ಲಿ ಕಾರ್ಡ್ ಆಡೋ ಖಯಾಲಿ. ಈಗಿರುವ ಸರ್ಕಾರಿ ಅಧಿಕಾರಿಗಳೇ ಇಸ್ಪೀಟ್ ಆಡೋರಿಗೆ ರೆಡ್ ಕಾರ್ಪೆಟ್ ಹಾಕ್ತಾರೆ ಅನ್ನೋದು ನಾಚಿಕೆಗೇಡಿನ ಸಂಗತಿ.ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ದೇಶಪಾಂಡೆ ನಗರದ ಪ್ರವಾಸಿ ಮಂದಿರದಲ್ಲಿ ‘ಕಾರ್ಡ್’ ಕುದುರೆಗಳ ಆಟ ಖದರ್ ಪಡೆದುಕೊಳ್ಳುತ್ತೆ. ಪ್ರವಾಸಿ ಮಂದಿರ ಸರ್ಕಾರಿ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಾಗೂ ನಗರಕ್ಕೆ ಬರುವ ಕೆಲ ಗಣ್ಯರಿಗೆ ಮೀಸಲಿರುತ್ತದೆ. ಆದರೆ, ಇದರ ಸದ್ಬಳಿಕೆಗಿಂತ ದುರ್ಬಳಿಕೆ ಮಾಡಿಕೊಳ್ಳುವವರೇ ಹೆಚ್ಚು. ಈಗ ನಿವೃತ್ತ ಅಧಿಕಾರಿಗಳೇ ತಮ್ಮ ಇಸ್ಪೀಟ್ ಅಡ್ಡಿ ಮಾಡಿಕೊಂಡಿರೋದು ಎಷ್ಟು ಸರಿ.
bigtvnews | Hubli Dharwad News | Kannada News | Karnataka News Hubli News | News In Hubli | Local news





