ಮಂಗಳೂರು: ಮಂಗಳೂರು ಉತ್ತರ ಉಪವಿಭಾಗದ ವಿಶೇಷ ಅಪರಾಧ ಪತ್ತೆ ದಳದ ಕಾರ್ಯಾಚರಣೆ ನಡೆಸಿ ಅಂತರ್ ಜಿಲ್ಲಾ ದನಕಳ್ಳತನ ಮತ್ತು ಮಾರಾಟದ ಆರೋಪಿಸಿದ್ದಾರೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಶೀರ್ ಯಾನೆ ಆರ್ಗಾ ಬಶೀರ್, ಬಂಧಿತ ವ್ಯಕ್ತಿ ಮೂಡಬಿದ್ರೆಯ ತೋಡಾರ್ ಬಳಿ ಆರೋಪಿ ವಶಕ್ಕೆ ಪಡೆದಿದ್ದು, ಮುಂದಿನ ಕ್ರಮಕ್ಕಾಗಿ ಧರ್ಮಸ್ಥಳ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಯಿತು. ಹಲವಾರು ದನಕಳ್ಳತನ ಪ್ರಕರಣಗಳಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿ ದನ ಕಳ್ಳತನವನ್ನೆ ಕಸುಬನ್ನಾಗಿಸಿಕೊಂಡಿದ್ದ. ಈತನ ಸಹಚರರು ದಸ್ತಗಿರಿಯಾದರೂ ಘಟನೆಯ ಬಳಿಕ ತಲೆಮರೆಸಿಕೊಂಡಿದ್ದರು. ಮುಂಜಾಗ್ರತಾ ಜಾಮೀನು ಪಡೆದ ಬಳಿಕ ಅದೇ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದರು. ಉಜಿರೆಯಲ್ಲಿ ದನಗಳನ್ನು ಕಳ್ಳತನಮಾಡಿ ಸಾಗಿಸುತ್ತಿದ್ದಾಗ ವಾಹನ ಅಡಿಮೇಲಾಗಿ ಬಿದ್ದಿತ್ತು. ಕಾರಿನಲ್ಲಿದ್ದ ದನಗಳೆಲ್ಲ ಸತ್ತು ಬಿದ್ದಿದ್ದವು.ಈ ವಾಹನದಲ್ಲಿ ಈತನೇ ಚಾಲಕನಾಗಿ ಘಟನೆಯ ಬಳಿಕ ತಲೆಮರೆಸಿಕೊಂಡಿದ್ದ. ಸುರತ್ಕಲ್ ಕೃಷ್ಣಾಪುರ ನೈತಂಗಡಿಯಲ್ಲಿ ಮನೆಯಿಂದ ದನ ಕಳ್ಳತನ ಮಾಡಿದ್ದ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು, ಕೊಡಗು ಜಿಲ್ಲೆಯಲ್ಲಿ ಕೇಸ್ ದಾಖಲಾಗಿದ್ದವು ಎಂದು ತಿಳಿದು ಬಂದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





