Breaking News

ಸಂವಿಧಾನ ಬದ್ದವಾಗಿ ಕಾರ್ಯನಿರ್ವಹಣೆ ಮಾಡುತ್ತಿರುವ ಸ್ಪೀಕರ್ ರಮೇಶ ಕುಮಾರ : ರಾಯರೆಡ್ಡಿ ವಿಶ್ವಾಸ

ಹುಬ್ಬಳ್ಳಿ: ರಾಜ್ಯದಲ್ಲಿ ಅತೃಪ್ತ ಶಾಸಕರು ರಾಜೀನಾಮೆಗೆ ಸಿದ್ದವಾಗಿದ್ದರೂ ಸಹ ಶಾಸಕರ ರಾಜೀನಾಮೆ ಕಾನೂನುಬದ್ದವಾಗಿಲ್ಲ.‌ ಈ ಕಾರಣದಿಂದಾಗಿಯೇ ಸ್ಪೀಕರ್ ರಮೇಶ ಕುಮಾರ ರಾಜೀನಾಮೆ ಅಂಗೀಕಾರ ಮಾಡುವುದಿಲ್ಲ ಎಂದು ಬಸವರಾಜ ರಾಯರೆಡ್ಡಿ ತಿಳಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಸ್ಪೀಕರ್ ಸಂವಿಧಾನಬದ್ದವಾಗಿನಡೆಯುತ್ತಿದ್ದಾರೆ. ಸಂವಿಧಾನ ಪರಿಪಾಲನೆ ಮಾಡುತ್ತಿರುವ ಸ್ಪೀಕರ್ ನಡೆ ನೂರರಷ್ಟು ಸರಿಯಾಗಿದೆ ಎಂದು ರಾಜೀನಾಮೆ ಅಂಗೀಕರಿಸಲು ನಿರಾಕರಿಸುತ್ತಿರುವ ಸ್ಪೀಕರ್ ನಡೆಯನ್ನು ರಾಯರೆಡ್ಡಿ ಸಮರ್ಥಿಸಿಕೊಂಡರು. ಅಲ್ಲದೇ ಈಗಾಗಲೇ ಜಾರಿಯಾಗಿರುವ ವಿಪ್ ಕಾಯ್ದೆಯನ್ನು ಶಾಸಕರು ಪಾಲನೆ ಮಾಡದೇ ಇದ್ದ ಪಕ್ಷದಲ್ಲಿ ಶಾಸಕರ ಪಕ್ಷದ ಸದಸ್ಯತ್ವವನ್ನು ರದ್ದುಗೊಳಿಸಲಾಗುವದು ಎಂದು ಅತೃಪ್ತ ಶಾಸಕರಗೆ ಎಚ್ಚರಿಕೆಯನ್ನು ನೀಡಿದರು.ಇದೇ 12 ರಿಂದ ಅಧಿವೇಶನ ಪ್ರಾರಂಭವಾಗಲಿದ್ದು, ಎಲ್ಲ ಶಾಸಕರು ತಪ್ಪದೆ ಅಧಿವೇಶನದಲ್ಲಿ ಭಾಗವಹಿಸಬೇಕು. ಇಲ್ಲದಿದ್ದರೆ ಶಾಸಕರ ವಿರುದ್ಧ ಹೆಬಿಯಸ್ ಕಾರ್ಪಸ್ ಅರ್ಜಿ‌ ಸಲ್ಲಿಸಲಾಗುವದು. ಈಗಾಗಲೇ ಈ ಕುರಿತು ಪಕ್ಷದಲ್ಲಿ ಚರ್ಚೆ ನಡೆಯುತ್ತಿದ್ದು, ಶಾಸಕರು ಎಚ್ಚೆತ್ತರೆ ಒಳ್ಳೆಯದು ಎಂದರು.ಬಿಜೆಪಿ ಅಧಿಕಾರವನ್ನು ದಕ್ಕಿಸಿಕೊಳ್ಳಲೆಬೇಕು ಎಂಬ ದುರಾಸೆಯಿಂದ ವಾಮಮಾರ್ಗವನ್ನು ಅನುಸರಿಸುತ್ತಿದೆ ಎಂದು ಬಿಜೆಪಿ ಮೇಲೆ ಹರಿಹಾಯ್ದ ರಾಯರೆಡ್ಡಿ, ಇದುವರೆಗೂ ಬಿಜೆಪಿ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆತಿಲ್ಲ. ಬಿಜೆಪಿ ಅಧಿಕಾರಕ್ಕೆ ಬರುವ ಸಂಭವವೇ ಇಲ್ಲ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಅಲ್ತಾಫ ಹಳ್ಳೂರ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶರೀಫ ಗರಗದ, ಇಮ್ರಾನ ಚೌದರಿ, ಮಂಜುನಾಥ ಸೇರಿದಂತೆ ಇತರರು ಉಪಸ್ಥಿತರಿದ್ದರು.

Share News

About admin

Check Also

ಸಚಿವರಿಗೆ ಖಾತೆ ಹಂಚಿದ ಸಿಎಂ ಡಿಕೆಶಿ..! ಯಾರಿಗೆ ಯಾವ ಖಾತೆ ಸಿಕ್ಕಿತು..?

ಡಿಕೆಶಿ ಸರ್ಕಾರದಲ್ಲಿ ಖಾತೆ ಫಿಕ್ಸ್..! ಕೆಲವರಿಗೆ ಹಳೆ ಖಾತೆ, ಕೆಲವರಿಗೆ ಹೊಸ ಜವಾಬ್ದಾರಿ..! ಬೆಂಗಳೂರು: ಸಚಿವರಿಗೆ ಖಾತೆ ಹಂಚಿದ ಸಿಎಂ …

Leave a Reply

Your email address will not be published. Required fields are marked *