Breaking News

ಮೈನಿಂಗ್ ಲಾರಿಗಳ ಶಾಶ್ವತವಾಗಿ ನಿಲ್ಲಿಸಲು ಪ್ರತಿಭಟನೆ.

ಚಿತ್ರದುರ್ಗ: ತಾಲ್ಲೂಕಿನ ಹಿರೇಗುಂಟನೂರಿನ ಮಾರ್ಗದಲ್ಲಿ, ಸಂಚರಿಸುವ ಅದಿರು ತುಂಬಿದ ಲಾರಿಗಳಿಂದ ಇಲ್ಲಿನ ಸಾರ್ವಜನಿಕರಿಗೆ, ಶಾಲಾಮಕ್ಕಳಿಗೆ, ತುಂಬಾ ತೊಂದರೆಯಾಗುತ್ತಿರುವ ಜೊತೆಗೆ, ರೈತರ ಬೆಳೆಗಳಿಗೆ ಧೂಳು ಕೂತು ಬೆಳೆಗಳು ಹಾನಿಯಾಗುತ್ತಿರುವ ಜೊತೆಗೆ, ಮೈನಿಂಗ್ ಕಂಪನಿಗಳು ಮಾಡುತ್ತಿರುವ ಅರಣ್ಯ ನಾಶಾದಿಂದ ಮಳೆಯೂ ಕೂಡ ಕಡಿಮೆಯಾಗಿದ್ದು, ಇಲ್ಲಿನ ಮೈನಿಂಗ್ ಕಂಪನಿಗಳ ವಿರುದ್ದ, ಈ ಭಾಗದ ಗ್ರಾಮಸ್ಥರು ಶನಿವಾರ ಹಿರೇಗುಂಟನೂರಿನ ಮುಖ್ಯ ಬಸ್ ನಿಲ್ದಾಣದ ಬಳಿ, ದಾವಣಗೆರೆ ಸಂಸದ GM ಸಿದ್ದೇಶ್ವರ್ ರವರ ಪತ್ನಿ ಗಾಯತ್ರಿ ರವರ ಮುಂದಾಳತ್ವದಲ್ಲಿ ರಸ್ತೆಯಲ್ಲಿ ಮೈನಿಂಗ್ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿ ತಹಶಿಲ್ದಾರ್ ರವರೆಗೆ ಮನವಿ ಸಲ್ಲಿಸಿದರು.ಇದೆ ವೇಳೆ ಮಾತನಾಡಿದ ಸಂಸದರ ಪತ್ನಿ ಗಾಯತ್ರಿ ರವರು ಕಳೆದ ಕೆಲವು ದಿನಗಳ ಹಿಂದೆ, ಮೈನಿಂಗ್ ಲಾರಿ ಗುದ್ದಿದ ಪರಿಣಾಮ, ಒಂಬತ್ತು ತಿಂಗಳ ಗರ್ಭಿಣಿ ಸಹಿತ, ಮೂರು ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ, ಲೋಡ್ ತುಂಬಿದ ಲಾರಿಗಳನ್ನು ಕ್ಲೀನರ್ಗಳು ಚಲಾಯಿಸುತ್ತಿದ್ದು, ಇವರ ಬಳಿ ಯಾವುದೇ ಡ್ರೈವ್ ವಿಂಗ್ ಲೈಸೆನ್ಸ್ ಇರುವುದಿಲ್ಲ, ಹಾಗೂ ಲಾರಿಗಳನ್ನು ಮೀತಿ ಮೀರಿದ ವೇಗದಲ್ಲಿ ಚಲಿಸುತ್ತಿರುವ ಪರಿಣಾಮದಿಂದ ಹೆಚ್ಚಿನ ಅಫಘತಗಳು ಸಂಭವಿಸುತ್ತಿದ್ದು ಈ ಭಾಗದಲ್ಲಿ ಮೈನಿಂಗ್ ಲಾರಿಗಳನ್ನು ಸಂಪೂರ್ಣ ನಿಷೇಧಿಸವಂತೆ ಆಗ್ರಹಿಸಿದರು.ಮೈನಿಂಗ್ ಕಂಪನಿಗಳು ಸರ್ಕಾರದಿಂದ ಆದೇಶ ಪಡೆದು ಅವೈಜ್ಞಾನಿಕ ರೀತಿಯಲ್ಲಿ ಮೈನಿಂಗ್ ಮಾಡುತ್ತಿದ್ದು, ಪ್ರತಿ ಇಲಾಖೆಯ ಕಂಡಿಷನ್ನುಗಳನ್ನು ಸರಿಯಾದ ರೀತಿಯಲ್ಲಿ ಪಾಲಿಸದೆ ನಿಯಮಗಳನ್ನು ಗಾಳಿಗೆ ತೂರಿ ಯಾವುದೇ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳರಳುತ್ತಿಲ್ಲ,ಮೈನಿಂಗ್ ಕಂಪನಿಗಳು ಈ ಭಾಗದ ಪ್ರತಿಭಾವಂತ ಯುವಕರಿಗೆ ಯಾವುದೇ ಉದ್ಯೋಗ ನೀಡುತ್ತಿಲ್ಲ, ಜೊತೆಗೆ ಸರ್ಕಾರ ನೀಡಿರುವ ಗಣಿಗಾರಿಕೆ ಪ್ರದೇಶಂಕಿತಲು ಹೆಚ್ಚಿನ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದು, ಸರ್ವೆ ನಡೆಸುವಂತಹ ಇದೆ ವೇಳೆ ಒತ್ತಾಯಿಸಿದರು.ಮನವಿ ಸ್ವೀಕರಿಸಿ ಮಾತನಾಡಿದ ತಹಶಿಲ್ದಾರ್ ಮಲ್ಲಿಕಾರ್ಜುನ ರವರು, ಮಾನ್ಯ ನ್ಯಾಯಾಲಯವು ಗಣಿ ಲಾರಿಗಳ ಓಡಾಟಕ್ಕೆ ಅನುಮತಿ ನೀಡಿದ್ದು, ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದು, ನಿಮ್ಮ ಮನವಿಯನ್ನು ಮತ್ತೆ ಸರ್ಕಾರದ ಗಮನಕ್ಕೆ ತಂದು ಪರಿಶೀಲಿಸುವಂತೆ ಒತ್ತಾಯಿಸಿಲಾಗುವುದಾಗಿ ತಿಳಿದರು.ಇದೇ ವೇಳೆ ಹಿರೇಗುಂಟನೂರು ತಾಲ್ಲೂಕು ಪಂಚಾಯ್ತಿ ಸದಸ್ಯ ಸುರೇಶ್, ಭೀಮಸಮುದ್ರ ತಾಲ್ಲೂಕು ಪಂಚಾಯ್ತಿ ಸದಸ್ಯ ಸುರೇಶ್ ನಾಯ್ಕ್, ಹಿರೇಗುಂಟನೂರು ಕೃಷಿ ಪತ್ತಿನ ಸಹಕಾರ ಸಂಘಗದ ಅಧ್ಯಕ್ಷ ಹೊನ್ನೂರಪ್ಪ, ಹಿರೇಗುಂಟನೂರು BJP ಬೂತ್ ಸಮಿತಿ ಅಧ್ಯಕ್ಷ ಮೋಹನ್, ಹಾಗೂ ರೈತ ಸಂಘದ ಮುಖಂಡರು ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಗ್ರಾಮಸ್ಥರು ಪ್ರತಿಭಟನೆಗೆ ಕೈಜೋಡಿಸಿದ್ದರು

Share News

About admin

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *