Breaking News

ಆಸ್ತಿ ಕರ ಬಾಕಿ ಹಿನ್ನೆಲೆ ವಾಣಿಜ್ಯ ಮಳಿಗೆ ಜಪ್ತಿ

ಧಾರವಾಡ : ಆಸ್ತಿ ಕರ ತುಂಬದ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಲಯ 2ರ ಸಹಾಯಕ ಆಯುಕ್ತರ ಕಚೇರಿ ವ್ಯಾಪ್ತಿಯಲ್ಲಿರುವ ವಾರ್ಡ್ ನಂಬರ್ 8ರಲ್ಲಿನ ವಾಣಿಜ್ಯ ಮಳಿಗೆಯೊಂದನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.ಮೆಹಬೂಬಸಾಬ್ ಕಲಕೇರಿ ಎಂಬುವವರ ಮಳಿಗೆ ಜಪ್ತಿ ಮಾಡಿದ್ದಾರೆ.ಕಳೆದ 20 ವರ್ಷಗಳಿಂದ ಆಸ್ತಿಕರವನ್ನೇ ತುಂಬಿರಲಿಲ್ಲ ಹೀಗಾಗಿ ಇಲ್ಲಿಯವರೆಗೆ ಒಟ್ಟು 1.87 ಲಕ್ಷ ರೂಪಾಯಿ ಆಸ್ತಿ ಕರ ಬಾಕಿ ಉಳಿದಿತ್ತು ಎನ್ನಲಾಗಿದೆ.ಮೆಹಬೂಬಸಾಬ್ ಕಲಕೇರಿ ಎಂಬುವವರಿಗೆ ಆಸ್ತಿ ಕರ ತುಂಬುವಂತೆ ಹಲವು ನೋಟಿಸ್ ನೀಡಿದ್ದರು, ಅಲ್ಲದೆ, ಸಾ ಮಿಲ್ (ಕಟ್ಟಿಗೆ ಅಡ್ಡೆ) ನಡೆಸುತ್ತಿದ್ದರು ಎನ್ನಲಾಗಿದೆ.ಈ ಕುರಿತು ಎಲ್ಲ ರೀತಿಯ ನೋಟಿಸ್ ನೀಡಿದ ಬಳಿಕ ಕೊನೆಗೆ ಮಳಿಗೆಯನ್ನು ಸ್ಥಗಿತಗೊಳಿಸಿ ಬಿಗ್ಗ ಹಾಕಿ ಜಪ್ತಿ ಮಾಡಿದ್ದಾರೆಈ ವೇಳೆ ಮಹಾನಗರ ಪಾಲಿಕೆಯ ಸಹಾಯಕ ಆಯುಕ್ತ ಕೆ.ಎನ್. ಹಂಚನಿಮನಿ,ಬಿಲ್ ಕಲೆಕ್ಟರ್ ಎಂ.ಎಂ. ಅಧೋನಿ,ಕಂದಾಯ ನಿರೀಕ್ಷಕ ಜಿ.ವಿ. ಹಿರೇಮಠ, ಹಾಗೂ ಎನ್.ಎಂ. ರಾಚಯ್ಯನವರ ಜಪ್ತಿಯ ವೇಳೆ ಇದ್ದರು.

Share News

About admin

Check Also

ಗರ್ಭಿಣಿ ಮಗಳ ಕ್ರೂರವಾಗಿ ಹತ್ಯೆಗೈದ ತಂದೆ: ಕೃತ್ಯಕ್ಕೆ ಬೆಚ್ಚಿಬಿದ್ದ ಧಾರವಾಡ

ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಕಾರಣಕ್ಕೆ ಪಾಪಿ ತಂದೆ ಹೆತ್ತ ಮಗಳ ಮೇಲೆಯೇ ಪೈಪ್‌ನಿಂದ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ …

Leave a Reply

Your email address will not be published. Required fields are marked *