ಉಡುಪಿ: ಕುಂದಾಪುರದ ಯಡಮೊಗ್ಗೆಯಲ್ಲಿ ನಡೆದ ಮಗು ಸಾವು ಪ್ರಕರಣ ಕ್ಕೆ ಸಂಬಂಧಿಸಿ ತಾಯಿ ರೇಖಾ ವಿರುದ್ದ ಕೊಲೆ ಹಾಗೂ ಆತ್ಮಹತ್ಯೆ ಯತ್ನ ಪ್ರಕರಣ ದಾಖಲಿಸಲಾಗಿದೆ.ಯಡಮೊಗ್ಗೆ ಮಗು ಸಾವಿನ ಪ್ರಕರಣಕ್ಕೆ ಸಂಭಂಧಿಸಿ ತಾಯಿ ರೇಖಾ ವಿರುದ್ದ ಕೊಲೆ ಹಾಗೂ ಅತ್ಮಹತ್ಯೆ ಯತ್ನ ಪ್ರಕರಣಗಳು ಶಂಕರನಾರಯಣ ಠಾಣೆಯಲ್ಲಿ ದಾಖಲಾಗಿವೆ.ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ರೇಖಾ ತಮ್ಮಿಬ್ಬರು ಮಕ್ಕಳ ಜೊತೆ ಆತ್ಮಹತ್ಯೆ ಮಾಡಲು ನದಿಗಿಳಿದಿದ್ದು ,ಈ ಸಂಧರ್ಭದಲ್ಲಿ ಮಗು ಕೈಯಿಂದ ಜಾರಿ ಹೋಗಿತ್ತು , ನಂತರ ಮತ್ತೊಂದು ಮಗುವನ್ನು ಹಿಡಿದು ಹಿಡಿದುಕೊಂಡು ನದಿಯಿಂದ ಮೇಲೆ ಬಂದಿದ್ದೇ ಎಂದು ಪೊಲೀಸರಿಗೆ ರೇಖಾ ಹೇಳಿಕೆ ನೀಡಿದ್ದಾಳೆ.ಆದರೆ ತೀವ್ರ ಮಾನಸಿಕ ಖಿನ್ನತೆಯಿಂದ ಕೂಡಿರುವ ರೇಖಾ ಹೇಳಿಕೆಯನ್ನ ಈಗಲೇ ಒಪ್ಪಲಾಗದ ಕಾರಣ ಪೊಲೀಸರು ಉಡುಪಿಯ ಡಾ .ಬಾಳಿಗ ಅಸ್ಪತ್ರೆಯಲ್ಲಿ ರೇಖಾಳನ್ನ ದಾಖಲಿಸಿದ್ದಾರೆ.ಮೊದಲಿನಿಂದಲೂ ರೇಖಾ ಹೇಳಿಕೆಗಳು ಗೊಂದಲ ಮಯವಾಗಿದ್ದು ,ರೇಖಾ ಚಿಕಿತ್ಸೆ ಬಳಿಕ ಮುಂದಿನ ವಿಚಾರಣೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





