Breaking News

ರೆಸಾರ್ಟ್ ರಾಜಕಾರಣದ ವಿರುದ್ದ ರೈತ ಸಂಘ ಪ್ರತಿಭಟನೆ

ಚಾಮರಾಜನಗರ: ಜನಪ್ರತಿನಿಧಿಗಳ ರೆಸಾರ್ಟ್ ರಾಜಕಾರಣದ ವಿರುದ್ದ ರಾಜ್ಯ ರೈತ ಸಂಘದ ಕಾರ್ಯಕರ್ತರು ಚಾಮರಾಜನಗರದಲ್ಲಿ ವಿನೂತನ ರೀತಿಯ ಛೀ…ಥೂ‌ ಚಳವಳಿ ನಡೆಸಿದರು.ಮೂರು ರಾಜಕೀಯ ಪಕ್ಷಗಳ ನಾಯಕರ ಭಾವಚಿತ್ರಕ್ಕೆ ಪೊರಕೆ ಹಾಗೂ ಚಪ್ಪಲಿ ಸೇವೆ ಮಾಡಿ ಪ್ರತಿಭಟನೆ ನಡೆಸಿದ ರೈತ ಕಾರ್ಯಕರ್ತರು, ಹೆದ್ದಾರಿ ತಡೆದು ಕೆಲಕಾಲ ಪ್ರತಿಭಟನೆ ನಡೆಸಿದರು.ಸಿದ್ದರಾಮಮಯ್ಯ, ಕುಮಾರಸ್ವಾಮಿ, ಯಡಿಯೂರಪ್ಪ ಭಾವಚಿತ್ರ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಅಭಿವೃದ್ದಿ ಬಗ್ಗೆ ಚಿಂತಿಸದೆ ರೈತರ ಹಿತ ಕಡೆಗಣಿಸಿದ ಸರ್ಕಾರಕ್ಕೆ ಛೀ.. ಥೂ… ಘೋಷಣೆ ಕೂಗಿದರು.ಈ ವೇಳೆ ಮಾತನಾಡಿದ ರೈತ ಮುಖಂಡ ಹೊನ್ನೂರು ಪ್ರಕಾಶ್ ಸಾರ್ವಜನಿಕರಿಂದ ಆಯ್ಕೆಯಾಗಿ ಅವರ ಕಷ್ಟ ಸುಖಕ್ಕೆ ಸ್ಪಂದಿಸದೆ ಕುದುರೆ ವ್ಯಾಪಾರಕ್ಕೊಳಗಾಗಿರುವ ಶಾಸಕರಿಗೆ ತಕ್ಕಪಾಠ ಕಲಿಸ ಬೇಕಾಗಿದೆ ಎಂದು ಕಿಡಿಕಾಡಿದರು.ಚಾಮರಾಜನಗರ ಜಿಲ್ಲೆಯಾದ್ಯಂತ ರಾಜ್ಯ ರೈತ ಸಂಘದಿಂದ ಛೀ…ಥೂ…ಎಂದು ಉಗಿದು ವಿನೂತನ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.

Share News

About admin

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *