Breaking News

ಚಂದ್ರಗ್ರಹಣ ಹಿನ್ನಲೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಪೂಜಾ ಸಮಯ ಬದಲಾವಣೆ

ಮಂಗಳೂರು: ನಾಳೆ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಳಿನ ಪೂಜಾ ಅವಧಿಯಲ್ಲಿ ಅಲ್ಪ ಬದಲಾವಣೆ ಮಾಡಲಾಗಿದೆ. ರಾತ್ರಿ 7ಕ್ಕೆ ನಡೆಯುವ ಮಹಾಪೂಜೆಯನ್ನು ಸಂಜೆ 6.30ಕ್ಕೆ ನಡೆಸಲಾಗುತ್ತದೆ. 7 ಗಂಟೆಯ ಬಳಿಕ ಭಕ್ತರಿಗೆ ದೇವಸ್ಥಾನ ಪ್ರವೇಶಿಸಲು ಅವಕಾಶವಿಲ್ಲ. ಸಂಜೆಯ ಆಶ್ಲೇಷಾ ಬಲಿ ಸೇವೆ ಹಾಗೂ ರಾತ್ರಿಯ ಭೋಜನ ವ್ಯವಸ್ಥೆಯೂ ಇರುವುದಿಲ್ಲ. ಬೆಳಗ್ಗಿನಿಂದ ಮಧ್ಯಾಹದ ವರೆಗಿನ ಪೂಜಾ ಅವಧಿ ಮತ್ತು ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ರಾತ್ರಿಯ ಹೂವಿನ ಪೂಜೆ, ರಂಗಪೂಜೆ ಇತ್ಯಾದಿ ಯಾವುದೇ ವಿಶೇಷ ಸೇವೆಗಳು ಮತ್ತು ರಾತ್ರಿ ಅನ್ನದಾನ ಇರುವುದಿಲ್ಲ. ಮಹಾಪೂಜೆ ಎಂದಿನಂತೆ ರಾತ್ರಿ 8 ಗಂಟೆಗೇ ನಡೆಯಲಿದೆ. ಹಾಗೆಯೇ ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ಕ್ಷೇತ್ರ ಧರ್ಮಸ್ಥಳದ ಕಾರ್ಯಚಟುವಟಿಕೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಎಂದಿನಂತೆ ಪೂಜೆ ಮತ್ತು ದೇವರ ದರ್ಶನ ಇರುತ್ತದೆ. ಚಂದ್ರಗ್ರಹಣ ಮಧ್ಯರಾತ್ರಿ ಆಗುವುದರಿಂದ ರಾತ್ರಿ 9 ಗಂಟೆ ತನಕವೂ ಅನ್ನಛತ್ರದಲ್ಲಿ ಎಂದಿನಂತೆ ಅನ್ನ ದಾಸೋಹ ಇರಲಿದೆ.

Share News

About admin

Check Also

ರೌಡಿಶೀಟರ್ ಹ್ಯಾರಿಸ್ ಪಠಾಣ್ ಗೂಂಡಾ ಕಾಯ್ದೆ ಅಡಿ ಬಂಧನ…

ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ: ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ವ್ಯವಹಾರ ಅಪಹರಣ ಕೊಲೆ ಪ್ರಕರಣಗಳು.. ಒಟ್ಟು 11 ಪ್ರಕರಣಗಳು ವಿವಿಧ …

Leave a Reply

Your email address will not be published. Required fields are marked *