Breaking News

ಸರ್ಕಾರಿ ಕಚೇರಿಗೆ ದೌಡಾಯಿಸಿದ ಪುನುಗು ಬೆಕ್ಕು

ಧಾರವಾಡ:ಧಾರವಾಡದ ಉಪ ವಿಭಾಗಾಧಿಕಾರಿ ಕಚೇರಿಗೆ ಅಪರೂಪದ ಅತಿಥಿಯೊಂದರ ಆಗಮನವಾಗಿತ್ತು. ಇದನ್ನು ನೋಡಿದ ಜನ ಒಂದು ಕ್ಷಣ ಹೌಹಾರಿದರು. ಅಷ್ಟಕ್ಕೂ ಜನರಲ್ಲಿ ಕುತೂಹಲ ಮೂಡಿಸಿದ ಆ ಅತಿಥಿ ಯಾರು ಅಂದ್ರೆ ಅದು ಪುನುಗು ಬೆಕ್ಕು.ಇಂದು ಬೆಳ್ಳಂ ಬೆಳಗ್ಗೆ ಉಪ ವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ಪ್ರತ್ಯಕ್ಷಗೊಂಡ ಪುನುಗು ಬೆಕ್ಕು, ಸುಮಾರು ನಾಲ್ಕು ಗಂಟೆಗೂ ಅಧಿಕ ಕಾಲ ಕಚೇರಿ ಆವರಣದಲ್ಲೇ ಅತ್ತಿಂದಿತ್ತ ಓಡಾಡುತ್ತಿತ್ತು. ಕಚೇರಿಗೆ ಆಗಮಿಸಿದ ಜನರು ಈ ಅಪರೂಪದ ಅತಿಥಿಯನ್ನು ನೋಡಿ ಕಣ್ತುಂಬಿಕೊಂಡರು. ನಂತರ ಸ್ಥಳಕ್ಕಾಗಮಿಸಿದ ಉರಗ ಪ್ರೇಮಿ ಯಲ್ಲಪ್ಪ ಪುನುಗು ಬೆಕ್ಕನ್ನು ರಕ್ಷಣೆ ಮಾಡಿ ಕಾಡಿಗೆ ಬಿಡುವಲ್ಲಿ ಯಶಸ್ವಿಯಾದರು.

Share News

About admin

Check Also

ಗರ್ಭಿಣಿ ಮಗಳ ಕ್ರೂರವಾಗಿ ಹತ್ಯೆಗೈದ ತಂದೆ: ಕೃತ್ಯಕ್ಕೆ ಬೆಚ್ಚಿಬಿದ್ದ ಧಾರವಾಡ

ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಕಾರಣಕ್ಕೆ ಪಾಪಿ ತಂದೆ ಹೆತ್ತ ಮಗಳ ಮೇಲೆಯೇ ಪೈಪ್‌ನಿಂದ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ …

Leave a Reply

Your email address will not be published. Required fields are marked *