ಮೆಟ್ರೋ ಉದ್ಯೋಗಿಗಳ ಕಥೆ ಆಧಾರಿತ ಜರ್ಕ್ ಚಿತ್ರ 26 ರಂದು ಬಿಡುಗಡೆ

ಹುಬ್ಬಳ್ಳಿ: ಬೆಂಗಳೂರು ಮೆಟ್ರೋದಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಕಥೆಯನ್ನು ಆಧರಿಸಿದ “ಜರ್ಕ್” ಚಿತ್ರ ಇದೇ ತಿಂಗಳು 26ರಂದು ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಮಹಾಂತೇಶ್ ಮದಕರಿ ಹೇಳಿದರು.ನಗರದ ಪತ್ರಿಕಾ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇರೆ ಊರಿನಿಂದ ಬೆಂಗಳೂರಿಗೆ ಬರುವ ಹುಡುಗನಿಗೆ ಆಗುವ ಅನುಭವದ ಪರಿಕಲ್ಪನೆಯೇ ಚಿತ್ರದ ಕಥೆಯಾಗಿದೆ. ಆಕ್ಷನ್ ಹಾಗೂ ಸಸ್ಪೆನ್ಸ್ ಕಥೆ ಜೊತೆಗೆ ಉತ್ತಮ ಸಂದೇಶ ಹಾಗೂ ಸಮಾಜದ ಅಂಕು ಡೊಂಕುಗಳನ್ನು ತಿದ್ದುವಂತಹ ಸನ್ನಿವೇಶಗಳನ್ನು ಒಳಗೊಂಡಿದೆ. ಈ ಸಿನಿಮಾದಲ್ಲಿ ಒಟ್ಟು 62 ದೃಶ್ಯಗಳಿದ್ದು, ಪ್ರತಿಯೊಂದು ಸೀನಲ್ಲೂ ಒಂದೊಂದು ಸಂದೇಶವಿದೆ. ಇನ್ನು ಒಟ್ಟು 5 ಹಾಡುಗಳಿದ್ದು, ಹಾಡುಗಳು ಉತ್ತಮವಾಗಿ ಮೂಡಿ ಬಂದಿವೆ ಎಂದರು.ಚಿತ್ರವನ್ನು ಬೆಂಗಳೂರು, ದೇವರಾಯನ ದುರ್ಗ ಹಾಗೂ ಕುಲುಮಾನಲಿಯಂತಹ ಸುಂದರ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. ಈ ಚಲನಚಿತ್ರದಲ್ಲಿ ನಾಯಕ ನಟನಾಗಿ ಬೀದರ್ ಮೂಲದ ಕೃಷ್ಣರಾಜ್ ಮತ್ತು ಸಚಿನ್, ನಾಯಕಿಯರಾಗಿ ನಿತ್ಯಾರಾಜ್, ಆಶಾ ಭಂಡಾರಿ, ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ, ಮಜಾ ಟಾಕೀಸ್​ ಖ್ಯಾತಿಯ ಕಾಮಿಡಿ ನಟನಾಗಿ ಪವನ್ ಹಾಗೂ ಸಾಹಸ ನಿರ್ದೇಶಕ ಥ್ರಿಲ್ಲರ್​ ಮಂಜು ಸಿನಿಮಾದಲ್ಲಿದ್ದಾರೆ.

Share News

About admin

Check Also

ಕೊರೋನಾ ಮಧ್ಯೆ ಹುಬ್ಬಳ್ಳಿಯಲ್ಲಿ ಸಂಕ್ರಾಂತಿ ಹಬ್ಬದ ವ್ಯಾಪಾರ

ಹುಬ್ಬಳ್ಳಿ : ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿಸಂಕ್ರಾಂತಿ ಹಬ್ಬ ಕಳೆಗಟ್ಟಿದ್ದು, ಮಾರುಕಟ್ಟೆಯಲ್ಲಿ ವಹಿವಾಟು ಕೂಡ ಹೆಚ್ಚಾಗಿದೆ. ಹೆಚ್ಚಿನ ಜನರು ಅಗತ್ಯ ವಸ್ತುಗಳನ್ನು …

Leave a Reply

Your email address will not be published. Required fields are marked *

You cannot copy content of this page