Breaking News

ಪೂರ್ವಾಪರ ತಿಳಿದುಕೊಳ್ಳದೆ ಪಾಸ್ ನೀಡಿದ ಮೈಸೂರಿನ ಸಂಸದ ಪ್ರತಾಪ್ ಸಿಂಹ ಅವರ ಮೇಲೂ ಕ್ರಮ…

ಬೆಂಗಳೂರು: ಮಹಾನ್ ರಾಷ್ಟ್ರ ಭಕ್ತರು ಎಂದು ಕರೆದುಕೊಳ್ಳುವ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ, ಸಭಾಪತಿ ಓಂಪ್ರಕಾಶ್ ಬಿರ್ಲಾ ಅವರು ಈ ಘಟನೆಯ ನೇರ ಹೊಣೆಯನ್ನು ಹೊತ್ತು ರಾಜಿನಾಮೆ ನೀಡಬೇಕು ಎಂದು ಮಾಜಿ ಸಂಸದ ವಿ ಎಸ್‌ ಉಗ್ರಪ್ಪ ಹೇಳಿದರು. ಈ ಕುರಿತು ಮಾಧ್ಯಮಗಳ ಜೊತೆಗೆ ವಿ ಎಸ್‌ ಉಗ್ರಪ್ಪ ಮಾತನಾಡಿ, ಡಿ.13, 2023 ದೇಶದ ಮತ್ತು ಸಂಸತ್ತಿನ ಇತಿಹಾಸದಲ್ಲೇ ಕರಾಳ ದಿನ. ಹಿಂದೆಂದೂ ಸಹ ಸಂಸತ್ತಿನ ಒಳಗಡೆ ಯಾವುದೇ ದಾಳಿಗಳು ನಡೆದಿರಲಿಲ್ಲ. ಪೂರ್ವಾಪರ ತಿಳಿದುಕೊಳ್ಳದೆ ಪಾಸ್ ನೀಡಿದ ಮೈಸೂರಿನ ಸಂಸದ ಪ್ರತಾಪ್ ಸಿಂಹ ಅವರ ಮೇಲೂ ಕ್ರಮ ತೆಗದುಕೊಳ್ಳಬೇಕು. ಈ ಹಿಂದೆ ದೇವಸ್ಥಾನಗಳ ಮೇಲೆ ದಾಳಿ ನಡೆದಿರುವುದಕ್ಕಿಂತ, ಪ್ರಜಾಪ್ರಭುತ್ವದ ಪವಿತ್ರ ದೇವಸ್ಥಾನ ಸಂಸತ್ತಿನ ಮೇಲೆ ದಾಳಿ ಮಾಡಿರುವುದು ತೀವ್ರ ಖಂಡನೀಯ, ಹೇಯ ಕೃತ್ಯ ಎಂದು ಹೇಳಿದರು.

ಸಂಸತ್ತಿನ ಹೊರಗೆ ನಡೆದ ದಾಳಿಯ ದಿನವೇ ಇಂತಹ ಅವಘಡ ನಡೆದಿರುವುದನ್ನು ನಾವು ಖಂಡಿಸುತ್ತೇವೆ. ಸಂಸತ್ತಿನ ನಡಾವಳಿಗಳು, ಭ‍ದ್ರತಾ ಪರಿಸ್ಥಿತಿಗಳನ್ನು ನಾನು ಕಣ್ಣಾರೆ ನೋಡಿದ್ದೇನೆ. ಆದರೂ ಅವಘಡ ನಡೆಯಲು ಹೇಗೆ ಸಾಧ್ಯ ಎಂಬುದು ಆಶ್ಚರ್ಯ ಮೂಡಿಸುತ್ತದೆ. ಸಂಸತ್ತಿನ ಆಡಳಿತ ಮತ್ತು ನಿರ್ವಹಣೆ ಲೋಕಸಭಾ ಮತ್ತು ರಾಜ್ಯಸಭಾ ಸಭಾಪತಿಗಳ ಅಡಿಯಲ್ಲಿ ಬರುತ್ತದೆ.

Share News

About BigTv News

Check Also

ಕರ್ತವ್ಯ ಆ್ಯಪ್‌ಗೆ ಖಾಕಿ ಕಿಡಿ..! | 24×7 ಡ್ಯೂಟಿ ಪೊಲೀಸರಿಗೆ ಹೊಸ ಹಾಜರಾತಿ ತಲೆನೋವುಹಾಜರಾತಿ ಕಡ್ಡಾಯಕ್ಕೆ ಪೊಲೀಸರ ವಿರೋಧ..!

ಕರ್ತವ್ಯ ಆ್ಯಪ್‌ಗೆ ಪೊಲೀಸರ ನೋ ಎಂಟ್ರಿ! | ಖಾಕಿಗೆ ಹೊಸ ರೂಲ್ಸ್‌ ಮೇಲೆ ಆಕ್ರೋಶ… ಖಾಕಿಗೆ ಕರ್ತವ್ಯ ಆ್ಯಪ್ ಶಾಕ್! …

Leave a Reply

Your email address will not be published. Required fields are marked *