Breaking News

ತೊಟ್ಟಿಲು ತೂಗುವ ಕೈ ದೇಶವಾಳಲಿ

ಹುಬ್ಬಳ್ಳಿ: ತೊಟ್ಟಿಲನ್ನು ತೂಗುವ ಕೈ ದೇಶವನ್ನು ರಕ್ಷಿಸಬಲ್ಲದು ಎಂದು ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಗಣಪತಿ ಗಂಗೊಳ್ಳಿ ತಿಳಿಸಿದರು. ನಗರದಲ್ಲಿಂದು ಲ್ಯಾಮಿಂಗ್ಟನ್ ರಸ್ತೆಯಲ್ಲಿರುವ ಪತ್ರಕರ್ತರ ಭವನದಲ್ಲಿ ಆಯೋಜಿಸಲಾಗಿದ್ದ, ಮಹಿಳಾ ಸೇನಾ ಭರ್ತಿಯ ಪೂರ್ವತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು,ಮನೆಯಲ್ಲಿನ ಎಲ್ಲ ಕಟ್ಟಳೆಗಳನ್ನು ಬದಿಗಿಟ್ಟು ಮಹಿಳೆಯರು ಸೈನ್ಯ ಸೇರಲು ಮುಂದೆ ಬಂದಿರುವುದು ಶ್ಲಾಘನೀಯವಾಗಿದೆ ಎಂದರು. ದೇಶದ ಮಹತ್ವ ಪೂರ್ಣ ಸೇವೆಯಲ್ಲಿ ಸೈನ್ಯದಲ್ಲಿ ಸೇವೆ ಸಲ್ಲಿಸುವುದು ಕೂಡ ಒಂದಾಗಿದೆ. ಇಲ್ಲಿ ಪುರುಷರು ಯಾವ ರೀತಿ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೋ ಅದೇ ರೀತಿಯಲ್ಲಿ ಮಹಿಳೆಯರು ಕೂಡ ಸೇವೆ ಸಲ್ಲಿಸಬಹುದು ಎಂದು ಅವರು ಆಶಯ ವ್ಯಕ್ತಪಡಿಸಿದರು. ಕಲೆ ಎಲ್ಲರನ್ನೂ ಕೈ ಮಾಡಿ ಕರೆಯುತ್ತದೇ ಆದರೇ ಕೆಲವರನ್ನು ಮಾತ್ರ ಆಯ್ಕೆ ಮಾಡುತ್ತದೇ ಅದೇ ರೀತಿಯಾಗಿ ಸೇನೆಯಲ್ಲಿ ಸೇವೆ ಸಲ್ಲಿಸುವ ಸುವರ್ಣಾವಕಾಶ ಎಲ್ಲರಿಗೂ ದೊರೆಯುವುದಿಲ್ಲ ಸೇನೆಯಲ್ಲಿ ಸೇವೆ ಸಲ್ಲಿಸುವುದು ಒಂದು ಮಹತ್ವ ಪೂರ್ಣ ಹುದ್ದೆಯಾಗಿದೇ ಅಲ್ಲದೇ ಪುರುಷರು ಹೆಚ್ಚಾಗಿ ಉತ್ಸುಕರಾಗಿ ಸೇನೆ ಸೇರಲು ಮುಂದೆ ಬರುತ್ತಿದ್ದರು ಆದರೇ ಈಗ ಮಹಿಳೆಯರು ಸ್ವಯಂ ಪ್ರೇರಣೆಯಿಂದ ಸೇನೆ ಸೇರಲು ಮುಂದೆಬಂದಿರುವುದನ್ನು ನೋಡಿದರೇ ಮಹಿಳೆ ಅಬಲೆಯಲ್ಲ ಸಬಲೆ ಎಂದು ಗೊತ್ತಾಗುತ್ತದೆ ಅಷ್ಟೇ ಅಲ್ಲದೆ ತೊಟ್ಟಿಲು ತೂಗುವ ಕೈ ದೇಶವನ್ನು ಕಾಯ ಬಲ್ಲದು ಎಂದು ಅವರುಹೇಳಿದರು. ಬಳಿಕ ಮಾತನಾಡಿದ ಸೇನಾ ತರಬೇತುದಾರ ಹಾಗೂ ಮಾಜಿ ಸೈನಿಕ ನಾಗರಾಜ ಗವಳಿ, ಮಿಲಿಟರಿ ಎಂದರೇ ಆರ್ಮಿ, ನೇವಿ, ಮಿಲಿಟರಿಯಾಗಿದೆ.ಅಲ್ಲದೇಮಿಲಿಟರಿಯಲ್ಲಿ ಮಿಲಿಟರಿ ಹಾಗೂ ಪ್ಯಾರಾಮಿಲಿಟರಿ ಎಂದು ಕರೆಯಲಾಗುತ್ತದೇ. ಪ್ಯಾರಾಮಿಲಿಟರಿಯಲ್ಲಿ ಸಿಐಎಸ್‍ಎಫ್, ಸಿಆರ್ ಪಿ ಎಫ್,ಬಿಎಸ್‍ಎಫ್, ಎಸ್.ಎಸ್.ಬಿ ಸೇರಿದಂತೆ ಹಲವಾರು ವಿಭಾಗಗಳು ಪ್ಯಾರಾಮಿಲಿಟರಿಯಲ್ಲಿ ಬರುವಂತವುಗಳಾಗಿವೆಎಂದು ಅವರು ಹೇಳಿದರು. ವಿವೇಕಾನಂದ ಮಾತಿನಂತೆ ಯುವ ಸಮುದಾಯ ಸದೃಡ ಕಾಯ, ಸದೃಡ ಮನಸ್ಸು, ಉಕ್ಕಿನ ನರಮಂಡಲ ಹೊಂದಿರುವಂತೆ ಸೇನೆಗೆಸೇರಬಯಸುವ ಯುವಕ ಹಾಗೂ ಯುವತಿಯರು ತಮ್ಮ ಆರೋಗ್ಯದ ಬಗ್ಗೆ ಹಾಗೂ ಕ್ರೀಡಾ ಚಟುವಟಿಕೆಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆನೀಡಿದರು. ದೇಶ ನಮಗೆ ಇಷ್ಟೆಲ್ಲ ನೀಡಿದೇ ಅದಕ್ಕೆ ನಾವು ಏನಾದರೂ ಸೇವ ಸಲ್ಲಿಸಬೇಕು ಹಾಗೂ ದೇಶದ ಭದ್ರತೆಗೆ ನಾವೆಲ್ಲ ಕಂಕಣಬದ್ದರಾಗಿ ಶ್ರಮಿಸುವಸದುದ್ದೇಶದಿಂದ ಸೇನೆಗೆ ಸೇರುವುದು ಅವಶ್ಯಕವಾಗಿದೆ.ಗ್ರಾಮೀಣ ಹಾಗೂ ನಗರಪ್ರದೇಶದಿಂದ ಹೆಚ್ಚಾಗಿ ಸೇನ ಸೇರಲು ಉತ್ಸುಕರಾಗಿದ್ದು, ಅಲ್ಲದೇ ತಮ್ಮ ಮಕ್ಕಳು ಸೇನೆ ಸೇರಿ ಸೇವೆ ಸಲ್ಲಿಸಲಿ ಎಂಬುವ ಮಹದಾಸೆಯಲ್ಲಿ ಮಕ್ಕಳನ್ನು ತರಬೇತಿಕಾರ್ಯಾಗಾರಕ್ಕೆ ಕರೆ ತಂದಿರುವುದು ವಿಶೇಷವಾಗಿದೆ ಅವರಿಗೆ ಅಭಿನಂದನೆ ಎಂದು ಅವರು ಹೇಳಿದರು.ಕಾರ್ಯಕ್ರಮದಲ್ಲಿ ಲಕ್ಷ್ಮೀ ಶೆಟ್ಟಿ, ವಿರೇಶ ಹಂಡಗಿ,ರವೀಂದ್ರ ರಾಮದುರ್ಗ ಸೇರಿದಂತೆ ನೂರಾರು ಮಹಿಳಾ ಸೇನಾ ಭರ್ತಿ ಅಭ್ಯರ್ಥಿಗಳು ಭಾಗವಹಿಸಿದ್ದರು.

Share News

About admin

Check Also

ಇಟ್ಟಂಗಿ ತುಂಬಿದ ಟೆಂಪೋ, ಬೈಕ್ ಡಿಕ್ಕಿ ಸವಾರ ಸಾವು.!!

ಇಟ್ಟಿಗೆ ತುಂಬಿದ ಟೆಂಪೋ ಬೈಕ್ ಮಧ್ಯೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಮನಸೂರ ಕ್ರಾಸ್ ಬಳಿ …

Leave a Reply

Your email address will not be published. Required fields are marked *