ಮಂಡ್ಯ: ಜಿಲ್ಲೆಯ ಕಿಕ್ಕೇರಿ ಪೋಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 7 ಜನ ಸಿಬ್ಬಂದಿಗಳು ವರ್ಗಾವಣೆಯಾದ ಹಿನ್ನೆಲೆಯಲ್ಲಿ ಬಿಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತು.ಕಾರ್ಯಕ್ರಮದಲ್ಲಿ ಎಸ್ ಐ ಚಂದ್ರಶೇಖರ್ ಮಾತನಾಡಿ ಪೋಲಿಸರು ಜನ ಸ್ನೇಹಿಯಾಗಿ ಉತ್ತಮ ಕೆಲಸಮಾಡುವಂತೆ ಸಲಹೆ ನೀಡಿದರು.ವರ್ಗಾವಣೆಯಾದ ಪೋಲೀಸರಾದ ಶಿವನಂಜಯ್ಯ, ಆನಂದ, ದೊರೆಸ್ವಾಮಿ, ನಟರಾಜು, ಶ್ರೀಕಾಂತ್, ನಿಂಗರಾಜು, ಬಸವರಾಜು ರವರಿಗೆ ಸನ್ಮಾನಿಸಿದರು.ಕಾರ್ಯಕ್ರಮದಲ್ಲಿ ಕೃಷ್ಣರಾಜಪೇಟೆ ಪೋಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಗಳಾದ ವೆಂಕಟೇಶ್, ಆನಂದೇಗೌಡ, ಸಹಾಯಕ ಸಬ್ ಇನ್ಸ್ಪೆಕ್ಟರ್ ಗಳಾದ ಸುರೇಂದ್ರನಾಥ್, ಗುರುಭಸವಯ್ಯ, ಶಾಂತಕುಮಾರ್, ಸಿಬ್ಬಂದಿಗಳಾದ ರೇವಣ್ಣ,ವಿನೋದ್ ಆಶೋಕ್ ಸೇರಿದಂತೆ ಅಲವರು ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





