Breaking News

ಜಿಲ್ಲಾಸ್ಪತ್ರೆಯಲ್ಲಿ ಯಂತ್ರೋಪಕರಣಗಳ ಕೊರತೆ ಸರಿಯಾದ ಚಿಕಿತ್ಸೆಯಿಲ್ಲದೇ ಪರದಾಡುತ್ತಿರುವ ರೋಗಿಗಳು

ಚಿತ್ರದುರ್ಗ: ಅದೊಂದು ಹೆಸರಿಗೆ ಮಾತ್ರ ಜಿಲ್ಲೆಯ ಬೃಹತ್ ಸರ್ಕಾರಿ ಆಸ್ಪತ್ರೆ. ಆದ್ರೆ ಅಲ್ಲಿ ಯಂತ್ರೋಪಕರಣಗಳಿದ್ರೂ ತಜ್ಞ ವೈದ್ಯರಿಲ್ಲ. ವೈದ್ಯರಿದ್ರೂ ಯಂತ್ರೋಪಕರಣಗಳು ಕೆಲಸ ಮಾಡಲ್ಲ. ಹೀಗಾಗಿ ರೋಗಿಗಳು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗಲಾರದೇ ಪರದಾಡುವಂತಾಗಿದೆ. ಅಷ್ಟಕ್ಕೂ ಯಾವ್ದಪ್ಪ ಆ ಜಿಲ್ಲಾಸ್ಪತ್ರೆ ಅಂತೀರ! ಈ ಸ್ಟೋರಿ ನೋಡಿ……,ಹೌದು ಒಂದಲ್ಲ ಒಂದು ರೀತಿಯಲ್ಲಿ ಸದಾ ಸುದ್ದಿಯಲ್ಲಿರೋ ಸರ್ಕಾರಿ ಆಸ್ಪತ್ರೆಯೇ ಚಿತ್ರದುರ್ಗ ಜಿಲ್ಲಾಸ್ಪತ್ರೆ. ಇಲ್ಲಿ ಸುಸಜ್ಜಿತ ಕೊಠಡಿಗಳಿವೆ,ಆರು ಸಾವಿರ ಬೆಡ್‍ಗಳ ವ್ಯವಸ್ಥೆ ಇದೆ ಹಾಗು ಎಲ್ಲಾ ರೋಗಿಗಳಿಗೂ ಸೂಕ್ತ ಚಿಕಿತ್ಸೆ ನೀಡುವ ಸೌಲಭ್ಯವಿದೆ. ಅಂತ ಹೇಳಿ, 2010ರಲ್ಲಿ ರಾಜ್ಯದಲ್ಲಿಯೇ ಅತ್ಯುತ್ತಮ ಆಸ್ಪತ್ರೆ ಅಂತ ಪ್ರಶಸ್ತಿ ಗಳಿಸಿದೆ. ಆದ್ರೆ ಈ ಆಸ್ಪತ್ರೆಯ ಅಸಲಿ ಸತ್ಯ ಇದಲ್ಲ. ಯಾಕಂದ್ರೆ ಈ ಆಸ್ಪತ್ರೆ ನೋಡೋದಕ್ಕೆ ಮಾತ್ರ ದೊಡ್ಡದಷ್ಟೇ!. ಆದ್ರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬದುಕಿದವರೇ ವಿರಳ. ಯಾಕಂದ್ರೆ, ವೈದ್ಯರು ಚಿಕಿತ್ಸೆ ನೀಡಲು ಅಗತ್ಯವಿರೋ ಮೂಲಭೂತ ಸೌಲಭ್ಯಗಳೇ ಇಲ್ಲಿಲ್ಲ. ಇನ್ನು ಉಸಿರಾಟದ ತೊಂದೆಯಿಂದ ಬರುವ ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡಲು ಇರುವ ವೆಂಟಿಲೇಟರ್‍ಗಳು ಒಂದೂ ಕೆಲಸ ಮಾಡಲ್ಲ. ಹೀಗಾಗಿ ಇಲ್ಲಿಗೆ ಚಿಕಿತ್ಸೆಗೆ ಬರುವ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗ್ತಿದೆ. ಅಲ್ದೇ ಯಾವ್ದೇ ಸೀರಿಯಸ್ ಪೇಷೆಂಟ್ ಬಂದ್ರೂ ಸಹ ರೋಗಿಗಳನ್ನು ದಾವಣಗೆರೆ ಆಸ್ಪತ್ರೆ ಹಾಗು ಖಾಸಗಿ ಆಸ್ಪತ್ರೆಗಳಿಗೆ ರೆಫರ್ ಮಾಡೋದು ಇಲ್ಲಿನ ವೈದ್ಯರ ಕಾಯಕವಾಗಿದೆ ಅನ್ನೋದು ಇವರ ಆರೋಪ.ಇನ್ನು ಈ ಆಸ್ಪತ್ರೆ ಅವಾಂತರದ ಬಗ್ಗೆ ಜಿಲ್ಲಾ ಸರ್ಜನ್ ಜಯಪ್ರಕಾಶ್ ಅವರನ್ನು ಕೇಳಿದ್ರೆ, ನಮ್ಮಲ್ಲಿ ಕೆಲವು ದಿನಗಳ ಹಿಂದೆ ಸಮಸ್ಯೆ ಇತ್ತು.ಆದ್ರೆ ಈಗ ಆರು ವೆಂಟಿಲೇಟರ್‍ಗಳನ್ನು ರಿಪೇರಿ ಮಾಡಿಸಲಾಗಿದ್ದೂ, ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಆದ್ರೆ ತಜ್ಞ ವೈದ್ಯರ ಕೊರತೆ ಕಾಡುತ್ತಿದ್ದೂ, ಅಗತ್ಯವಿರೋ ವೈದ್ಯರ ನೇಮಕಾತಿಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಜೊತೆಗೆ ಅರೆಕಾಲಿಕ ವೈದ್ಯರ ನೇಮಕಕ್ಕೂ ಸಿದ್ಧತೆಗಳು ನಡೆದಿವೆ ಅಂತಾರೆ.ಒಟ್ಟಾರೆ ಕೋಟೆನಾಡು ಚಿತ್ರದುರ್ಗದ ಜಿಲ್ಲಾಸ್ಪತ್ರೆ ಜನರ ಪಾಲಿಗೆ ಯಮಲೋಕವೆನಿಸಿದೆ. ಅನಾರೋಗ್ಯದಿಂದ ಬಳಲುತ್ತಾ ಉಸಿರಾಡಲಾಗದೇ ಆಸ್ಪತ್ರೆಗೆ ಬಂದ್ರೆ ವೆಂಟಿಲೇಟರ್ ಗಳಿಲ್ಲದೇ ಪರದಾಡುವಂತಾಗಿದೆ. ಹೀಗಾಗಿ ತುರ್ತಾಗಿ ಅಗತ್ಯ ಸೌಲಭ್ಯ ಕಲ್ಪಿಸಿ ಬಡ ರೋಗಿಗಳ ಪಾಳಿಗೆ ಈ ಆಸ್ಪತ್ರೆ ಸಂಜೀವಿನಿ ಎನಿಸಲಿ ಅನ್ನೋದು ಸಾರ್ವಜನಿಕರ ಆಶಯ.

Share News

About admin

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *