ಕೊಪ್ಪಳ: ಚಿಕಿತ್ಸೆ ಪಡೆಯಲು ಖಾಸಗಿ ಕ್ಲಿನಿಕ್‌ಗೆ ಬಂದಿದ್ದ ಮಹಿಳೆ ಮೇಲೆ ಆರ್‌ಎಂಪಿ ವೈದ್ಯ ಅತ್ಯಾಚಾರಕ್ಕೆ ಯತ್ನಿಸಿದ ಆರೋಪ ಕೇಳಿಬಂದಿದೆ. ಕುಕನೂರು ತಾಲೂಕಿನ ರ್ಯಾವಣಕಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಆರ್‌ಎಂಪಿ ವೈದ್ಯ ಪ್ರಭುರಾಜ್ ಶೆಟ್ಟರ್ ವಿರುದ್ಧ ಮಹಿಳೆ ಆರೋಪ ಮಾಡಿದ್ದು, ಗುರುವಾರ ಚಿಕಿತ್ಸೆಗಾಗಿ ಬಂದಾಗ ಈ ಕೃತ್ಯಕ್ಕೆ ಯತ್ನಿಸಲಾಗಿದೆ ಎಂದು ದೂರಿದ್ದಾರೆ. ಈ ಸಂಬಂಧ ಕುಕನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

