ಮಂಡ್ಯ: ಕುಡಿದು ಕಬ್ಬಿನ ಲಾರಿಯನ್ನು ಚಾಲನೆ ಮಾಡಿ ಎಮ್ಮೆಗೆ ಡಿಕ್ಕಿ ಹೊಡೆದ ಪರಿಣಾಮ ಎಮ್ಮೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಂಡ್ಯ ಕೋರಮಂಡಲ್ ನಲ್ಲಿ ನೆಡದಿದೆ .
ಮಂಡ್ಯ ಜಿಲ್ಲೆಯ ಕುಪ್ಪಳ್ಳಿ ಕೆರೆ ಬಳಿ ಕೋರಮಂಡಲ್ ಸಕ್ಕರೆ ಕಾರ್ಖಾನೆಗೆ ಕಬ್ಬನ್ನು ತುಂಬಿಕೊಂಡು ಹೋಗುತ್ತಿದ್ದು ,ಅತಿಯಾಗಿ ಕಬ್ಬನ್ನು ತುಂಬಿಕೊಂಡು ಮತ್ತು ಮದ್ಯಪಾನ ಮಾಡಿದ್ದರಿಂದ ಈ ಘಟನೆ ನಡೆದಿದೆ ಎಂದು ಅಕ್ಕಪಕ್ಕದ ಸಾರ್ವಜನಿಕರು ತಿಳಿಸಿದ್ದಾರೆ .
ಮೂಡ್ನಲ್ಲಿ ಗ್ರಾಮದ ಚಾಲಕನಾದ ನಾಗೇಶ್ ಅಲಿಯಾಸ್ (ಬೆಂಕಿ ) ಎಂದು ತಿಳಿದು ಬಂದಿದೆ .
ಲಾರಿ ಮಾಲೀಕರಾದ ಕುರುಬಳ್ಳಿ ಪ್ರತಾಪ್ ಗೆ ಸೇರಿದ ಲಾರಿ ಎಂದು ಹೇಳಲಾಗುತ್ತಿದೆ .
ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಬಂದು ಕಾನೂನಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ..
bigtvnews | Hubli Dharwad News | Kannada News | Karnataka News Hubli News | News In Hubli | Local news





