ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಕಾಲಾ ಜಾದು(ಬ್ಲಾಕ್ ಮ್ಯಾಜಿಕ್) ಗೇಲಿಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ. ನಿರುದ್ಯೋಗ ಮತ್ತು ಬೆಲೆ ಏರಿಕೆ ವಿರುದ್ಧ ಆಗಸ್ಟ್ 5 ರಂದು ಕಾಂಗ್ರೆಸ್ ನಡೆಸಿದ್ದ ಪ್ರತಿಭಟನೆಯನ್ನು ಗುರಿಯಾಗಿಟ್ಟುಕೊಂಡು ಪ್ರಧಾನಿ ಮೋದಿ ‘ಕಾಲಾ ಜಾದು’ ಎಂದು ಗೇಲಿ ಮಾಡಿದ್ದರು.
‘ನಿಮ್ಮ ಶೋಷಣೆಗಳನ್ನು ಮರೆಮಾಚಲು ‘ಕಾಲ ಜಾದು’ ಎಂಬ ಮೂಢನಂಬಿಕೆಯ ಪದಗಳನ್ನು ಬಳಸುವುದನ್ನು ನಿಲ್ಲಿಸಿ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. “ಪ್ರಧಾನ ಮಂತ್ರಿ ಜೀ, ಪ್ರಧಾನಿ ಹುದ್ದೆಯ ಘನತೆಯನ್ನು ಕೆಳಗಿಳಿಸುವುದನ್ನು ಮತ್ತು ದೇಶವನ್ನು ದಾರಿ ತಪ್ಪಿಸುವುದನ್ನು ನಿಲ್ಲಿಸಿ. ಜನರ ಸಮಸ್ಯೆಗಳಿಗೆ ನೀವು ಉತ್ತರ ಕೊಡಲೇಬೇಕು” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಕಾಂಗ್ರೆಸ್ ಅನ್ನು ಹೆಸರಿಸದೆ, ಪ್ರಧಾನಿ ಮೋದಿ ಬುಧವಾರ ಕಾಂಗ್ರೆಸ್ ಮತ್ತು ಅದರ ಆಗಸ್ಟ್ 5 ರ ಪ್ರತಿಭಟನೆಯ ಮೇಲೆ ವಾಗ್ದಾಳಿ ಮಾಡಿದ್ದರು. ‘ಕೆಲವರು ತಮ್ಮ ಹತಾಶೆಯನ್ನು ಹೊರಹಾಕಲು ಆಗಸ್ಟ್ 5 ರಂದು ‘ಬ್ಲಾಕ್ ಮ್ಯಾಜಿಕ್’ ಅನ್ನು ಆಶ್ರಯಿಸಿದ್ದಾರೆ ಎಂದು ಗೇಲಿ ಮಾಡಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





