ಚಿಕ್ಕೋಡಿ: ಪ್ರವಾಹ ಭೀತಿ ನಿರ್ಮಿಸಿ ಸುರಿಯುತ್ತಿರುವ ಮಳೆಗೆ ಬೆಳಗಾವಿ ಜಿಲ್ಲೆಯ ಬಹುತೇಕ ಗ್ರಾಮದ ಜನರು ತತ್ತರಿಸಿ ಹೋಗಿದ್ದಾರೆ.ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರಗ್ರಾಮದಲ್ಲಿ 200 ಕ್ಕೂ ಹೆಚ್ಚು ಕುಟುಂಬಗಳು ಮಳೆಯಿಂದ ಸಿಲುಕಿಕೊಂಡಿವೆ.ನಿರಂತರ ಸುರಿಯುತ್ತಿರುವ ಮಳೆಯ ಪರಿಣಾಮಹೊರಗೆ ಬಾರಲು ದಾರಿ ಇಲ್ಲದೆ ಜನರ ಪರದಾಡುತ್ತಿದ್ದಾರೆ. ಬೋಟ್ ಕಳಿಸಿ ನಮ್ಮನ್ನ ಹೊರಗೆ ತೆಗೆಯಿರಿ ಎಂದು ಮನವಿ ಮಾಡಿದ್ದು, ಕಳೆದ ನಾಲ್ಕು ದಿನಗಳಿಂದ ಬೋಟ್ ಬರುವಿಕೆಗೆ ದಾರಿ ಕಾಯುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





